ಶಿವಮೊಗ್ಗ ನಗರದ ಲಕ್ಷ್ಮೀ ಕ್ಯಾಂಟೀನ್, ಸೈನ್ಸ್ ಫೀಲ್ಡ್, ತುಂಗಾನಗರ, ವಿನೋಬನಗರ ಎಪಿಎಂಸಿ, ಪ್ರೀಡಂ ಪಾರ್ಕ್, ಕೋಟೆ ರಸ್ತೆ, ಅಶೋಕ ವೃತ್ತ, ಭದ್ರಾವತಿ ನಗರದ ರೋಟರಿ ಕ್ಲಬ್, ಎಂ ಸರ್ಕಲ್, ಉಜನೀಪುರ, ಶಿವಾಜಿ ವೃತ್ತ, ಉಂಬ್ಳೆ ಬೈಲು ರಸ್ತೆ ಚರ್ಚ್ ಮೈಧಾನ, ಹೊಳೆಹೊನ್ನೂರು ಭಗೀರಥ ವೃತ್ತ, ತೀರ್ಥಹಳ್ಳಿ ಟೌನ್ ಮಾರಿಕಾಂಬ ದೇವಸ್ಥಾನ, ಮಾಳೂರಿನ ಬೆಜ್ಜುವಳ್ಳಿ, ಮಾವಿನಕೊಪ್ಪ, ನಗರದ ಚಿಕ್ಕಪೇಟೆ, ಸಾಗರ ಟೌನ್ ನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಹುಲ್ಲತ್ತಿ, ಜೋಗ, ಆಚಾಪುರ, ಶಿಕಾರಿಪುರದ ಶಿಕಾರಿಪುರ ಟೌನ್, ಸೊರಬ ತಾಲ್ಲೂಕು ಕಛೇರಿ ಹತ್ತಿರ, ಆನವಟ್ಟಿ ಕೋಟಿಪುರದಲ್ಲಿ ಶಿವಮೊಗ್ಗ ಎ, ಶಿವಮೊಗ್ಗ ಬಿ, ಭದ್ರಾವತಿ, ಸಾಗರ, ಶಿಕಾರಿಪುರ ಹಾಗೂ ತೀರ್ಥಹಳ್ಳಿ ಉಪ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯಾ ಠಾಣೆಗಳ ಠಾಣಾಧಿಕಾರಿಗಳು ಬ್ರೀಫಿಂಗ್ ಮಾಡಿ ಠಾಣಾ ಸಿಬ್ಬಂದಿಗಳು ನಿರ್ವಹಿಸಬೇಕಾದ ಕರ್ತವ್ಯಗಳು ಹಾಗೂ ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಸಂಬಂದಪಟ್ಟ ಪೊಲೀಸ್ ನಿರೀಕ್ಷಕರು / ವೃತ್ತ ನಿರೀಕ್ಷಕರುಗಳು ಉಪಸ್ಥಿತರಿದ್ದರು ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದುಕೊರತೆಯನ್ನು ಆಲಿಸಲಾಗಿರುತ್ತದೆ.