ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನವನ್ನು ಕಳೆದ 5 ತಿಂಗಳಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಕರ್ನಾಟಕ ರಾಜ್ಯ ನರೇರಾ ಯೋಜನೆ ಅನುಷ್ಠಾನದಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದೆ. ನರೇಗಾ ಯೋಜನೆಯ ಕೂಲಿಕಾರರನ್ನು ಸೈನಿಕರು ಎಂದು ಕರೆಯುತ್ತೇನೆ. ಜಲಶಕ್ತಿ ಯೋಜನೆ ( catch the rain ) ಯಶಸ್ಸು ಕಾಣಲು ನರೇಗಾ ಯೋಜನೆಯ ಸೈನಿಕರು ಕಾರಣ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಿಡಿಒ ಗ್ರಾ.ಪಂ ಅದ್ಯಕ್ಷ ಉಪಾಧ್ಯಕ್ಷ ರಿಗೆ ತರಭೇತಿ ಕಾರ್ಯಾಗಾರ ಆಗಸ್ಟ್ 17 ರಂದು ತುಮಕೂರು ನಲ್ಲಿ ನಡೆಯಲಿದೆ. ಗ್ರಾ.ಪಂ ಸದಸ್ಯರಿಗೂ ಕೂಡ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತರಬೇತಿ ಕಾರ್ಯಾಗಾರ ನಡೆಸಲಾಗುತ್ತದೆ. ಜಿ.ಪಂ ವ್ಯಾಪ್ತಿಯ 28 ಸಾವಿರ ಕೆರೆಗಳನ್ನು ಗ್ರಾಪಂ ಗೆ ನೀಡಲಾಗಿದ್ದು ಇವುಗಳ ಅಭಿವೃದ್ಧಿ ಕಾರ್ಯ ನಡೆಸಲಿದ್ದೇವೆ. ಕಲ್ಯಾಣಿ, ಗೋ ಕಟ್ಟೆ, ಕೆರೆಗಳ ಅಭಿವೃದ್ಧಿ ಮಾಡಿ ಜಲ ಸಂಗ್ರಹ ಮಾಡಲಾಗುತ್ತದೆ. ಕೆರೆಗಳ ಒತ್ತುವರಿ ಮಾಡಿದ್ದನ್ನು ಎಷ್ಟೇ ಪ್ರಭಾವಿಗಳಾಗಿದ್ದರು ತೆರವುಗೊಳಿಸಿ ಅಭಿವೃದ್ಧಿ ಮಾಡುತ್ತೇನೆ. ಕಳೆದ ಬಾರಿ 13 ಕೋಟಿ ಮಾನವ ದಿನಗಳನ್ನು ಕೊಟ್ಟಿದ್ದರು. ಮತ್ತೆ 2 ಕೋಟಿ ಮಾನವ ದಿನಗಳನ್ನು ಕೊಟ್ಟ ನಂತರ 8 ಸಾವಿರ ಕೋಟಿ ರೂಪಾಯಿ ಅನುದಾನ ಹೆಚ್ಚಿಗೆ ನೀಡಿದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153