ಮಹಿಳೆಯರು ಸ್ವಾವಲಂಬಿಗಳಾಗಲು ಸಹಕಾರ ಅಗತ್ಯ. ವಾಗ್ದೇವಿ
ಮಹಿಳೆಯರು ಸ್ವಾವಲಂಬಿಗಳಾಗಬೇಕು. ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರಿಗೆ ಸಾಕಷ್ಟು ಸ್ಥಾನಮಾನಗಳಿವೆ ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಇನ್ನರ್ ವೀಲ್ ಶಿವಮೊಗ್ಗಪೂರ್ವ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅಭಿಮತ ವ್ಯಕ್ತಪಡಿಸಿದರು ಅವರು ಇಂದು ರೋಟರಿಸಭಾಂಗಣದಲ್ಲಿ ಇನ್ನರ್ ವೀಲ್ ವತಿಯಿಂದ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಸಮಾಜದಲ್ಲಿ ಗೌರವ ಸಿಗಬೇಕಾದರೆ ಮುಖ್ಯ ವಾಹಿನಿಗೆ ಬರಬೇಕು ಈ ನಿಟ್ಟಿನಲ್ಲಿ ಇನ್ನರ್ ವೀಲ್ ಸಂಸ್ಥೆಯ ಸದಸ್ಯನರಿಂದ ಸಂಗ್ರಹ ಮಾಡಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ನೀಡುವುದರ ಮುಖಾಂತರ ಅವರ ಬದುಕು ಹಸನ ವಾಗಲಿ ಎಂದು ನುಡಿದರು ಇನ್ನರ್ ವೀಲ್ ನಿಯೋಜಿತ ಜಿಲ್ಲಾ ಚೇರ್ಮನ್ ಶಬರಿ ಕಡಿದಾಳ್ ವರು ಮಾತನಾಡುತ್ತಾ ದಾನಿಗಳು ನೀಡಿದ ವಸ್ತುಗಳು ಸದುಪಯೋಗವಾಗಬೇಕು ಅವರ ಸಂಪಾದನೆ ಮಾಡಿ ಮುಂದಿನ ದಿನದಲ್ಲಿ ಇನ್ನೊಬ್ಬರ ಬದುಕಿಗೆ ನೆರವಾಗಬೇಕು ಎಂದು ನುಡಿದರು. ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಅವರು ಮಾತನಾಡುತ್ತಾ ಈಗಾಗಲೇ ಇನ್ನರ್ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ಜಿಲ್ಲೆಯಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಹಲವಾರು ಗುರುತರ ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಜನಮಾನಸದಲ್ಲಿ ಸದಾ ಉಳಿದಿದೆ ಇದರಿಂದ ಹೆಚ್ಚು ಹೆಚ್ಚು ಸದಾ ಸೀನಿಯರ್ ಇನ್ನರ್ವಿಲ್ ಕ್ಲಬ್ ಸೇರಿದ ಮುಖಾಂತರ ಸೇವೆ ಮಾಡುವ ಕೈಗಳನ್ನು ಬಲಪಡಿಸಬೇಕು ಎಂದು ನುಡಿದರು ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ವಾಣಿ ಪ್ರವೀಣ್ ವೀಣಾ ಹರ್ಷ. ವೇದಾ ನಾಗರಾಜ್. ವಿಜಯ ರಾಯ್ಕರ್. ನಮಿತಾ ಸೂರ್ಯನಾರಾಯಣ್. ಮಧುರ ಮಹೇಶ್ ಶ್ವೇತಾ ಅಶಿತ್. ಕಾರ್ಯದರ್ಶಿ ಲತಾ ಸೋಮಣ್ಣ ವೀಣಾ ಸುರೇಶ್ ವಿನೋದ ದಳವೆ ವಿಜಯ ಜವಳಿ. ಲತಾ ಶಂಕರ್ . ಸುಮಾ ಮಂಜುನಾಥ್ ವಿಜಯವಾಣಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *