ಜೆ ಸಿ ಐ ಶಿವಮೊಗ್ಗ ಶಾಶ್ವತಿ ಘಟಕದಿಂದ
ಟ್ರಾಫಿಕ್ ಪೊಲೀಸ್ ಇಲಾಖೆಯವರಿಗೆ ಮಾಸ್ಕ್ ಹಾಗೂ ವಾಟರ್ ಬಾಟಲ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಶಾಶ್ವತಿ ಘಟಕ ಅಧ್ಯಕ್ಷರಾದ ಜೆಸಿ ಶಿಲ್ಪ ಅವರು ಮಾತನಾಡಿ ನಾವು ಸಮಾಜದಲ್ಲಿ ಸಾಕಷ್ಟು ನೆಮ್ಮದಿಯಿಂದ ಸಂತೋಷದಿಂದ ಎಲ್ಲರೂ ಭದ್ರತೆಯಿಂದ ಇದ್ದೇವೆ ಅಂದರೆ ಮುಖ್ಯ ಕಾರಣ ರಕ್ಷಣೆ ಇಲಾಖೆ, ಬಹು ಮುಖ್ಯವಾಗಿ ದೇಶ ಸುಭದ್ರವಾಗಿ ನಡೆಯುತ್ತೆ ಅಂದರೆ ಎಲ್ಲ ಸರ್ವ ಜನರು ಶಾಂತಿಯಿಂದ ಇದ್ದಾರೆ ಎಂದರೆ ಅದಕ್ಕೆ ಕಾರಣ ಸೈನಿಕರು ಮಳೆ ನೋಡ್ದೆ ಬಿಸಿಲನ್ನು ನೋಡ್ದೆ ಕುಟುಂಬವನ್ನು ಲೆಕ್ಕಕ್ಕೆ ತಗೊಳ್ದೆ ಸದಾ ಜನರ ಸೇವೆಗೆ ಆಲೋಚನೆ ಮಾಡುವಂತಹ ವ್ಯಕ್ತಿಯೇ ಪೊಲೀಸ್ ಇಲಾಖೆ ಹಾಗೆ ಟ್ರಾಫಿಕ್ ನಲ್ಲೂ ಕೂಡ ಐದು ನಿಮಿಷ ಒಂದು ಕಡೆ ನಿಂತ್ಕೊಳ್ಳಕ್ಕಾಗಲ್ಲ ಅದರಲ್ಲೂ ಕೂಡ ಬೆಳಿಗ್ಗೆಯಿಂದ ಸಂಜೆವರೆಗೆ ಯಾರಿಗೂ ತೊಂದರೆ ಆಗದಂತೆ ಟ್ರಾಫಿಕ್ ವ್ಯವಸ್ಥೆಯನ್ನು ಸುಗಮವಾಗಿ ಸಂಚಾರಗೊಳಿಸುತ್ತಾರೆ. ಜನರ ಸೇವೆಗಾಗಿ ಪೊಲೀಸರು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಮಾಸ್ಕ್ ಹಾಗೂ ಇತರ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಶಾಶ್ವತಿ ಘಟಕದ ಅಧ್ಯಕ್ಷರು ಜೆಸಿ ಶಿಲ್ಪ ಸತೀಶ್ ಡಾಕ್ಟರ್ ಶಾಂತ ಸುರೇಂದ್ರ ಮೇಡಂ, ಪಾಪು, ರಘು, ಸುಗಂಧಿನಿ,ಸವಿತಾ ಮಲ್ಲಿಕಾ ಪದ್ಮ,ಶಾಂತ,ನಿತಿನ್ ಪಾಟೀಲ್ ಸೋಮಶೇಖರ್ ಸರ್ ಅರವಿಂದ್ ಮುಂತಾದವರು ಉಪಸ್ಥಿತರಿದ್ದರು.

ವರದಿ – ನಾಗರಾಜ್. K. B ( ಪಾಪು )

Leave a Reply

Your email address will not be published. Required fields are marked *