ಇತ್ತಿಚೀನ ದಿನಗಳಲ್ಲಿ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಕೆಲವು ಖಾಸಗಿ ವ್ಯಕ್ತಿಗಳು ಮತ್ತು ಕೆಲವೊಂದು ಸಂಘ-ಸಂಸ್ಥೆಗಳು ಆಮಿಷಗಳನ್ನು ನೀಡಿ ನಮ್ಮ ಸಂಘಕ್ಕೆ ನೋಂದಣಿಯಾದರೆ ನಿಮ್ಮ ಎಲ್ಲ ಕುಂದುಕೊರತೆಗಳನ್ನು ಬಗೆಹರಿಸಿ ಕೊಡುತ್ತೇವೆ, ಜಮೀನು ಮಂಜೂರಾತಿ ಮಾಡಿಸಿಕೊಡುತ್ತೇವೆ ಎಂಬಿತ್ಯಾದಿ ಸುಳ್ಳು ಭರವಸೆಗಳನ್ನು ನೀಡುತ್ತಿರುವುದಾಗಿ ಹಾಗೂ ಚೀಟಿ ಮತ್ತು ಫೈನಾನ್ಸ್ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವಂತೆ ಒತ್ತಡವನ್ನು ಹಾಕುತ್ತಿದ್ದಾರೆಂಬ ಮಾಹಿತಿಯು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಛೇರಿಯ ಗಮನಕ್ಕೆ ಬಂದಿರುತ್ತದೆ.

ಇಂತಹ ಅಮಿಷಗಳಿಗೆ ಕಿವಿಗೊಡಬಾರದೆಂದು ಹಾಗೂ ಖಾಸಗೀ ಯೂಟ್ಯೂಬ್, ಇನ್ ಸ್ಟಾಗ್ರಾಮ್, ವಾಟ್ಸಪ್ ಗ್ರೂಪ್, ಫೇಸ್‌ಬುಕ್ ಪೇಜ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ಮಾಜಿ ಸೈನಿಕರ ಪಾಲಿಸಿಗಳ ಹೆಚ್ಚಿನ ಪತ್ರಗಳು ಕೂಡ ನಕಲಿಯಾಗಿರುತ್ತವೆಯೆಂದು ಹಾಗೂ ಮಾಜಿ ಸೈನಿಕರುಗಳಿಗೆ ಪಾಲಿಸಿ/ದಾಖಲೆಗಳ ಯಾವುದೇ ರೀತಿಯ ಅನುಮಾನಗಳಿದ್ದರೆ ನೇರವಾಗಿ ಸೈನಿಕ ಕಛೇರಿಗೆ ಸಂಪರ್ಕಿಸಿ ಸ್ಪಷ್ಟಿಕರಣವನ್ನು ಪಡೆಯಬೇಕೆಂದು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *