ಭದ್ರಾವತಿ ವೀರಾಪುರ ಗ್ರಾಮದ ಮಹಿಳೆಯೊಬ್ಬರು ಇ.ಆರ್.ಎಸ್.ಎಸ್ – 112 ತುರ್ತು ಸಹಾಯವಾಣಿಗೆ ಕರೆ ಮಾಡಿ, ತನ್ನ ಮಗ ಮನೆಯ ಬಾಗಿಲು ಹಾಕಿಕೊಂಡು ನೇಣು ಬಿಗುದು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾನೆಂದು ದೂರು ಬಂದ ಮೇರೆಗೆ ಇ.ಆರ್.ಎಸ್.ಎಸ್ ವಾಹನದ ಅಧಿಕಾರಿಗಳಾದ ಶ್ರೀ ವಿನಯ್ ಕುಮಾರ್ ಸಿಪಿಸಿ – 1618, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ವಾಹನದ ಚಾಲಕರಾದ ಶ್ರೀ ಸಂತೋಷ್ ಕುಮಾರ್ ಎಪಿಸಿ 50 ರವರುಗಳು ಕೂಡಲೇ ಕಾರ್ಯ ಪ್ರೌವೃತ್ತರಾಗಿ ಸ್ಥಳಕ್ಕೆ ಹೋಗಿ ಮನೆಯ ಬಾಗಿಲು ತೆಗೆಸಿ ನೇಣು ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ತಡೆದು ರಕ್ಷಿಸಿರುತ್ತಾರೆ.
ನಂತರ ವಿಚಾರಿಸಲಾಗಿ ಸದರಿ ವ್ಯಕ್ತಿಯು
ಹಿಂದೆ ಚಾಲಕ ವೃತ್ತಿ ಮಾಡುತ್ತಿದ್ದು, ಸ್ವಲ್ಪ ದಿನಗಳಿಂದ ಯಾವುದೇ ಕೆಲಸ ಇಲ್ಲದ ಕಾರಣ, ಮದ್ಯಪಾನ ಚಟ ಶುರು ಮಾಡಿ ಹಣಕ್ಕಾಗಿ ತನ್ನ ತಾಯಿಯೊಂದಿಗೆ ಜಗಳ ಮಾಡಿಕೊಂಡು, ಮನೆಯ ಬಾಗಿಲು ಹಾಕಿಕೊಂಡು ನೇಣು ಹಾಕಿಕೊಳ್ಳಲು ಪ್ರಯತ್ನಿಸಿರುತ್ತಾನೆಂದು ತಿಳಿದು ಬಂದಿದ್ದು, ಸದರಿ ವ್ಯಕ್ತಿಗೆ ಈ ರೀತಿ ಮಾಡದಂತೆ ಬುದ್ದಿವಾದ ಹೇಳಲಾಗಿರುತ್ತದೆ.
ಕೂಡಲೇ ಕಾರ್ಯಪ್ರೌವೃತ್ತರಾಗಿ ಕರ್ತವ್ಯ ನಿಷ್ಠೆ ಮೆರೆದ ಇ.ಆರ್.ಎಸ್.ಎಸ್ – 112 ನ ಪೊಲೀಸ್ ಅಧಿಕಾರಿಗಳಿಗೆ ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.