ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2024-25ನೇ ಸಾಲಿನಲ್ಲಿ ಮಂಜೂರಾದ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಅಲ್ಪಸಂಖ್ಯಾತರ ಸಮುದಾಯದ ಯುವ ಜನರಿಗೆ ರಾಜ್ಯದ ಬೆಳಗಾವಿ/ ಮೈಸೂರು ಕಂದಾಯ ವಿಭಾಗಗಳಲ್ಲಿ 90 ದಿನಗಳ ವಸತಿಯುತ ಪೊಲೀಸ್ ಸಬ್ ಇನ್ಸಪೆಕ್ಟರ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಯನ್ನು ಆಯೋಜಿಸಿದ್ದು, 21 ರಿಂದ 30 ವರ್ಷ ವಯೋಮಿತಿಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.


ಯು.ಜಿ.ಸಿ.ಯಿಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪಡೆದಿರಬೇಕು. ವಿದ್ಯಾರ್ಥಿಗಳು ಕರ್ನಾಟಕದ ನಿವಾಸಿಗಳಾಗಿದ್ದು, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಸಮುದಾಯಗಳಿಗೆ ಸೇರಿದವಾಗಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ. 8.00 ಲಕ್ಷಕ್ಕಿಂತ ಮೀರಿರಬಾರದು. ಪುರುಷರು ಕನಿಷ್ಠ ಎತ್ತರ 168 ಸೆಂ.ಮೀ, ತೂಕ 50 ಕೆ.ಜಿ ಹಾಗೂ ಎದೆಯ ಸುತ್ತಳತೆ 76 ಸೆಂ.ಮಿ. ಇರಬೇಕು ಮತ್ತು ಮಹಿಳೆಯರು ಕನಿಷ್ಠ 157 ಸೆಂ.ಮೀ. ಎತ್ತರ, 45 ಕೆ. ಜಿ. ತೂಕವಿರಬೇಕು. ಅಭ್ಯರ್ಥಿಗಳು ಪದವಿಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.


ಆಸಕ್ತರು ವೆಬ್‌ಸೈಟ್ https://sevasinduservices.karnataka.gov.in/sevasindhu/departmentservices, https://dom.karnatka.gov.in ರಲ್ಲಿ ಮೇ 23 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಾದ ಶಿವಮೊಗ್ಗ -7676888388, ಭದ್ರಾವತಿ-9538853680, ತೀರ್ಥಹಳ್ಳಿ-8861982835, ಸೊರಬ-9513815513, ಶಿಕಾರಿಪುರ-7829136724, ಹೊಸನಗರ-9008447029 ಹಾಗೂ ಸಾಗರ-7338222907 ಗಳನ್ನು ಸಂಪರ್ಕಿಸುವುದು.

Leave a Reply

Your email address will not be published. Required fields are marked *