2025-26 ನೇ ಶೈಕ್ಷಣಿಕ ಪ್ರವೇಶಕ್ಕಾಗಿ ಖಾಲಿ ಇರುವ ಸೀಟುಗಳಿಗೆ ಸಾಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ಉತೀರ್ಣ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.


ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರು ಎಲೆಕ್ಟ್ರಿಷಿಯನ್, ಎಲೆಕ್ಟಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಮೆಕ್ಯಾನಿಕ್ ಎಲೆಕ್ಟಿçಕ್ ವೆಹಿಕಲ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್, ಸಿಎನ್‌ಸಿ ಮೆಷಿನಿಂಗ್ ಟೆಕ್ನಿಷಿಯನ್, ವರ್ಚುಯಲ್ ಅನಲೈಸಿನ್ ಅಂಡ್ ಡಿಸೈನರ್. ಮೆಕ್ಯಾನಿಕ್ ಡೀಸೆಲ್, ಇಂಡಸ್ಟ್ರೀಯಲ್ ರೋಬೊಟಿಕ್ಸ್ ಅಂಡ್ ಡಿಜಿಟಲ್ ಮ್ಯಾನಿಫ್ಯಾಕ್ಟರಿಂಗ್, ಇಂಜನಿಯರಿಂಗ್ ಡಿಸೈನ್ ಟೆಕ್ನಿಷಿಯನ್ ಹಾಗೂ ಮ್ಯಾನುಫ್ಯಾಕ್ಚರಿಂಗ್ ಪ್ರೋಸಸ್ ಕಂಟ್ರೊಲ್ ಅಂಡ್ ಆಟೋಮೇಷನ್ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸುವುದು.


ಎಸ್‌ಎಸ್‌ಎಲ್‌ಸಿ ಅನುತ್ತೀರ್ಣ ಅಥವಾ ಎಂಟನೇ ತರಗತಿ ಉತ್ತೀರ್ಣರಾದವರು ವೆಲ್ಡರ್, ಡ್ರೆಸ್ ಮೇಕಿಂಗ್ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸುವುದು.
ಆಸಕ್ತಿ ಅಭ್ಯರ್ಥಿಗಳು ಮೇ 28 ರೊಳಗೆ www.cite.karnataka.gov.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಗೊಂಡ ಸರ್ಕಾರಿ ಐಟಿಐಗಳಲ್ಲಿ ಮೂಲಕ ದಾಖಲಾತಿ ಹಾಗೂ ಅಟೆಸ್ಟೆಡ್ ಜೆರಾಕ್ಸ್ ಕಾಪಿಗಳೊಂದಿಗೆ ನಿಗದಿತ ದಿನಾಂಕದೊಳಗೆ ದಾಖಲಾತಿ ಪರಿಶೀಲನೆ ಮಾಡಿಸಿಕೊಳ್ಳಬೇಕು.


ಹೆಚ್ಚಿನ ಮಾಹಿತಿಗಾಗಿ ಹಾಗೂ ನೇರವಾಗಿ ಅರ್ಜಿ ಸಲ್ಲಿಸಲು ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಹೊಸನಗರ ರಸ್ತೆ, ರಾಮನಗರ, ಸಾಗರ ಇಲ್ಲಿ ಸಂಪರ್ಕಿಸುವುದು. ಹಾಗೂ ದೂ.ಸಂ: 8884349984/ 7975263812/ 8073653319/ 9113668875 ಗಳನ್ನು ಸಂಪರ್ಕಿಸುವಂತೆ ಎಂದು ಸಾಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.


Leave a Reply

Your email address will not be published. Required fields are marked *