
ಶಿವಮೊಗ್ಗ ಮಾರ್ವಾಡಿ ಯುವ ಮಂಚ್ ಅಧ್ಯಕ್ಷರಾಗಿ ಚಾಯ್ ವಾಲ ದಿನೇಶ್ ದಾಸ್ ವೈಷ್ಣವ ಆಯ್ಕೆಯಾಗಿದ್ದಾರೆ. ನೂತನ ಶಿವಮೊಗ್ಗ ಶಾಖೆಯ ಕಾರ್ಯಕಾರಿಣಿ ರಚನೆಯಾಗಿದೆ.
ನೂತನ ಕಾರ್ಯದರ್ಶಿಯಾಗಿ ದಿನೇಶ್ ಕುಮಾರ್ ಉಪಾಧ್ಯಕ್ಷರಾಗಿ ನಂದಲಾಲ್ ಜಾಟ ಸಂಯಮ್ ಜೈನ್ ಖಜಾಂಚಿಯಾಗಿ ರಾಮ ಕಿಶಾನ್ ಜಂಟಿ ಕಾರ್ಯದರ್ಶಿಯಾಗಿ ಜಾಕಿ ಜೈನ್ ಸಂಚಾಲಕರಾಗಿ ಆಕಾಶ್ ಜಗದೀಶ್ ಪಂಕಜ್ ಆಯ್ಕೆಯಾಗಿದ್ದಾರೆ.
ಶುಭ ಸಮಯದಲ್ಲಿ ಉಪಮುಖ್ಯಮಂತ್ರಿಗಳಾದ ಕೆ ಎಸ್ ಈಶ್ವರಪ್ಪನವರು ತಮ್ಮ ನಿವಾಸದಲ್ಲಿ ನೂತನ ಅಧ್ಯಕ್ಷರಾದ ಚಾಯ್ ವಾಲ ದಿನೇಶ್ ಮತ್ತು ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ದಿನೇಶ್ corana ಸಮಯ ಮತ್ತು ಸಮಯದಲ್ಲಿ ನಾನು ಮತ್ತು ತಂಡದ ಸಮಾಜಮುಖಿ ಕೆಲಸಗಳನ್ನು ಪರಿಗಣಿಸಿ ಕೇಂದ್ರ ಸಮಾಜದ ಮುಖ್ಯಸ್ಥರು ಈ ಹುದ್ದೆಯನ್ನು ನೀಡಿದ್ದಾರೆ.ಅವರು ನೀಡಿದ ಹುದ್ದೆಯನ್ನು ನಾನು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದರು.ನನಗೆ ಮತ್ತು ತಂಡಕ್ಕೆ ಅವಕಾಶ ನೀಡಿದ ಮುಖ್ಯಸ್ಥರಿಗೆ ಮತ್ತು ಹಿರಿಯರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.