
ಸ್ಟೆಪ್ ಹೋಲ್ಡರ್ಸ್ ಡ್ಯಾನ್ಸ್ ಸ್ಟುಡಿಯೋ ಸಂಸ್ಥೆಯಲ್ಲಿ ನೃತ್ಯ ಕಲಿಯುತ್ತಿರುವ ಮಕ್ಕಳು ಸತತವಾಗಿ ಐದು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಎರಡನೇ ಬಾರಿ ಏಷ್ಯನ್ ಚಾಂಪಿಯನ್ನು ಪ್ರತಿನಿಧಿಸಿ ನಮ್ಮ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆಂದು ಅರುಣ್‌ರಾಜ್ ಶೆಟ್ಟಿ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಇದೇ ಮೇ ೨೬ರಿಂದ ಜೂ. ೧ರ ವರೆಗೆ ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಫಿಟ್‌ನೆಸ್ ಏರೋಬಿಕ್ಸ್ ಮತ್ತು ಹಿಪ್ ಹಾಪ್ ಚಾಂಪಿಯನ್ ಶಿಪ್‌ನಲ್ಲಿ ಶಿವಮೊಗ್ಗದ ಸ್ಟೆಪ್ ಹೋಲ್ಡರ್ಸ್ ನೃತ್ಯ ಸಂಸ್ಥೆಯ ೭ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದರು.
ಅದಿತ್ರಿ, ಚಿರಾಕ್ಷ್, ವಿಶಾಲ್, ನೀರಜ್, ಸುಮಂತ್, ಜೀವಿಕಾ, ಪಾರ್ಥ ದುಬೈನಲ್ಲಿ ನಡೆಯುತ್ತಿರುವ ಚಾಂಪಿಯನ್ ಶಿಪ್ ನಲ್ಲಿ ೧೪ ಮತ್ತು ೧೭ ವರ್ಷದೊಳಗಿನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ಪ್ರತಿಭೆಗಳಿಗೆ ಕೊರತೆಯಿಲ್ಲ ಅವಕಾಶಗಳು ಸಿಗಬೇಕು, ಹಾಗೂ ಕೆಲವರಲ್ಲಿ ಪ್ರತಿಭೆಯಿದೆ ಅವಕಾಶವಿದೆ ಆದರೆ ಆರ್ಥಿಕವಾಗಿ ದುರ್ಬಲರಾಗಿ ರುವುದರಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲವೆಂದರು.
ಇದಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಸಹಕಾರ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಗಳಿಂದ ಇಂತಹ ಪ್ರತಿಭೆಗಳಿಗೆ ಸಹಕಾರ ಸಿಕ್ಕರೇ ಇನ್ನು ಹೆಚ್ಚಿನ ಮಕ್ಕಳ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕೆ ರಾಜ್ಯಕ್ಕೆ ಕೀರ್ತಿ ತರುವುದರಲ್ಲಿ ಯಾವುದೇ ಸಂಶಯವಿಲ್ಲವೆಂದರು.
ನಮ್ಮ ತಂಡದಲ್ಲೇ ಅನೇಕ ಪ್ರತಿಭೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸುವ ಸ್ಪರ್ಧಿಗಳಿದ್ದರು ಕೂಡಾ ಅವರಲ್ಲಿ ದುಬೈಗೆ ಹೋಗಲು ಹಣಕಾಸಿನ ಕೊರತೆಯಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ವೆಂದರೆ, ಆದ್ದರಿಂದ ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಇಂತಹ ಪ್ರತಿಭೆಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಂದರ್ಭದಲ್ಲಿ ಕಿರಾನ್ ಇಕ್ಕೇರಿ ಉಪಸ್ಥಿತರಿದ್ದರು.