ವಿಶೇಷ ಲೇಖನ
11 ನೇ ಅಂತರಾಷ್ಟಿçÃಯ ಯೋಗ ದಿನಾಚರಣೆ
ಯೋಗಾಭ್ಯಾಸದ ಮೂಲಕ ಸುಸ್ಥಿರ ಆರೋಗ್ಯ ಸಮೃದ್ದಿ
‘ಯೋಗಃ ಕರ್ಮಸು ಕೌಶಲಂ’-ಯೋಗವು ಕರ್ಮದಲ್ಲಿ ಕುಶಲತೆಯನ್ನು ತರುತ್ತದೆ ಎಂಬ ಭಗವದ್ಗೀತೆಯ ಮಾತಿನಂತೆ ಯೋಗಾಭ್ಯಾಸದಿಂದ ನಾವು ಮಾಡುವ ಪ್ರತಿ ಕೆಲಸದಲ್ಲಿ ಕ್ಷೇಮವನ್ನು ಕಾಣಬಹುದು.
ಇದೊಂದು ಪರಿವರ್ತನಾತ್ಮಕ ಅಭ್ಯಾಸವಾಗಿದ್ದು, ಮನಸ್ಸು ಮತ್ತು ದೇಹದ ಸಾಮರಸ್ಯ, ಆಲೋಚನೆ ಮತ್ತು ಕ್ರಿಯೆಯ ನಡುವಿನ ಸಮತೋಲನ, ಸಂಯಮ ಮತ್ತು ತೃಪ್ತಿಯ ಏಕತೆಯನ್ನು ಪ್ರತಿನಿಧಿಸುತ್ತದೆ.
ಇದು ದೇಹ, ಮನಸ್ಸು, ಮತ್ತು ಆತ್ಮವನ್ನು ಸಂಯೋಜಿಸುತ್ತದೆ. ನಮ್ಮ ಕಾರ್ಯನಿರತ ಜೀವನಕ್ಕೆ ಶಾಂತಿಯನ್ನು ತರುವ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನು ನೀಡುತ್ತದೆ. ಅದರ ರೂಪಾಂತರ ಶಕ್ತಿಯನ್ನು ನಾವು ಈ ವಿಶೇಷ ದಿನವಾದ ಜೂನ್ 21 ರಂದು ಆಚರಿಸುತ್ತಿದ್ದೇವೆ.
2014 ರ ಡಿಸೆಂಬರ್ 11 ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 21 ಅನ್ನು ಅಂತರಾಷ್ಟಿçÃಯ ಯೋಗ ದಿನವೆಂದು ಘೋಷಿಸಿತು. ಅಂದಿನಿAದ, ಪ್ರಪಂಚದಾದ್ಯAತ ಲಕ್ಷಾಂತರ ಜನರು ಯೋಗಾಭ್ಯಾಸದಿಂದ ಒಗ್ಗೂಡಿ, ಪ್ರತಿ ವರ್ಷ ಈ ದಿನವನ್ನು ಅಂತರಾಷ್ಟಿçÃಯ ಯೋಗ ದಿನವನ್ನಾಗಿ ಆಚರಿಸುತ್ತಿದ್ದಾರೆ.
ಈ ಜಾಗತಿಕ ಆಚರಣೆಯು ಏಕತೆ ಮತ್ತು ಸಾಮರಸ್ಯವನ್ನು ಬೆಳೆಸುತ್ತದೆ. ಗಡಿಗಳು ಮತ್ತು ಸಂಸ್ಕೃತಿಗಳನ್ನು ಮೀರಿ, ಶಾಂತಿ ಮತ್ತು ಯೋಗಕ್ಷೇಮದ ಜಗತ್ತಿನೆಡೆ ನಮ್ಮನ್ನು ಕೊಂಡೊಯ್ಯುತ್ತಿದೆ. 2023 ರಲ್ಲಿ ವಿಶ್ವ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆದ ಅಂತರಾಷ್ಟಿçÃಯ ಯೋಗ ದಿನಾಚರಣೆಯು ಹೆಚ್ಚಿನ ಸಂಖ್ಯೆಯ ರಾಷ್ಟçಗಳಿಂದ ಯೋಗ ಉತ್ಸಾಹಿಗಳ ಭಾಗವಹಿಸುವಿಕೆಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಠಿಸತು.
ಈ ವರ್ಷ 11 ನೇ ಅಂತರಾಷ್ಟಿçÃಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಇದು ಎಲ್ಲರ ಭಾಗವಹಿಸುವಿಕೆಯನ್ನು ಸ್ವಾಗತಿಸುವ ಮತ್ತು ಗೌರವಿಸುವ ಆಚರಣೆಯಾಗಿದೆ. ಈ ಬಾರಿ “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಘೋಷವಾಕ್ಯದಡಿ ಯುಎನ್‌ಎಚ್‌ಕ್ಯೂ(Uಓಊಕಿ) ನ ಉತ್ತರ ಲಾನ್ ಪ್ರದೇಶದಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆ ನಡೆಯಲಿದ್ದು ಯುಎನ್ ಸದಸ್ಯ ರಾಷ್ಟçಗಳ ಪ್ರತಿನಿಧಿಗಳು, ಯುಎನ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ನ್ಯೂಯಾರ್ಕ್ನ ವಿವಿಧ ಕ್ಷೇತ್ರಗಳ ಗಮನಾರ್ಹ ವ್ಯಕ್ತಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಯೋಗವನ್ನು ಯೋಗಕ್ಷೇಮಕ್ಕೆ ಒತ್ತು ನೀಡುವ ಮತ್ತು ಜಾಗತಿಕ ಆರೋಗ್ಯ ಮತ್ತು ಶಾಂತಿಯನ್ನು ಉತ್ತೇಜಿಸುವ ವ್ಯಾಪಕ ಚಳವಳಿಯಾಗಿ ಪರಿವರ್ತಿಸುವುದು ಇದರ ಗುರಿಯಾಗಿದೆ.
ಜೂನ್ 21 ರಂದೇ ವಿಶ್ವ ಯೋಗ ದಿನ ಆಚರಣೆ ಏಕೆ?
2014 ರಲ್ಲಿ ಯುನೈಟೆಡ್ ನೇಷನ್ ಜನರಲ್ ಅಸೆಂಬ್ಲಿಯಲ್ಲಿ ಪ್ರಾರಂಭವಾದ ನಂತರ 2015 ರಿಂದ ವಾರ್ಷಿಕವಾಗಿ ಜೂನ್ 21 ರಂದು ವಿಶ್ವದಾದ್ಯಂತ ಯೋಗದ ಅಂತರಾಷ್ಟಿçÃಯ ದಿನವನ್ನು ಆಚರಿಸಲಾಗುತ್ತಿದೆ. ಯೋಗವು ಪ್ರಾಚೀನ ಭಾರತದಲ್ಲಿ ಹುಟ್ಟಿಕೊಂಡ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ತಮ್ಮ ಯುಎನ್ ಭಾಷಣದಲ್ಲಿ ಜೂನ್ 21 ರ ದಿನಾಂಕವನ್ನು ಸೂಚಿಸಿದ್ದರು.
ಏಕೆಂದರೆ ಇದು ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾಗಿದೆ ಮತ್ತು ಪ್ರಪಂಚದ ಅತಿ ಉದ್ದದ ದಿನವಾಗಿದೆ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಪಡೆದಿದೆ.
ಯೋಗವು ಭಾರತದ ಪ್ರಾಚೀನ ವೈಭವದ ಪರಂಪರೆಯಾಗಿದೆ. ಇದು ನಮ್ಮ ದೈನಂದಿನ ಜೀವನದಲ್ಲಿ ಆರೋಗ್ಯ, ಸಮತೋಲನ ಮತ್ತು ಶಾಂತಿಯನ್ನು ತರುವ ಸಾಮರ್ಥ್ಯ ಹೊಂದಿದೆ. ಈ 11 ನೇ ಅಂತರಾಷ್ಟಿçÃಯ ಯೋಗ ದಿನದಂದು, ನಾವೆಲ್ಲರೂ ಯೋಗವನ್ನು ನಮ್ಮ ದಿನಚರಿಯಲ್ಲಿ ಸೇರಿಸಿಕೊಂಡು ಹೆಚ್ಚು ಆರೋಗ್ಯಕರ ಮತ್ತು ಸುಸ್ಥಿರ ಜೀವನ ಶೈಲಿಯೆಡೆ ಹೆಜ್ಜೆ ಹಾಕೋಣ.
ಮೊದಲ ಅಂತರಾಷ್ಟಿçÃಯ ಯೋಗ ದಿನವನ್ನು ಹೊಸದಿಲ್ಲಿಯ ರಾಜ್‌ಪಥ್(ಈಗ ಕರ್ತವ್ಯ ಪಥ) ನಲ್ಲಿ ನಡೆಸಲಾಗಿತ್ತು. ಭಾರತದಲ್ಲಿ ಯೋಗ ದಿನಕ್ಕೆ ಬೇಕಾದ ತಯಾರಿಯನ್ನು ಕೇಂದ್ರ ಸರಕಾರದ ಆಯುಷ್ ಇಲಾಖೆ ವ್ಯವಸ್ಥೆ ಮಾಡುತ್ತದೆ. 2015 ರ ಜೂನ್ 21 ರಂದು ಆಚರಿಸಲಾದ ಮೊಟ್ಟ÷ ಮೊದಲ ವಿಶ್ವ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು, 84 ದೇಶಗಳ ಪ್ರತಿನಿಧಿಗಳು ಸೇರಿದಂತೆ 35,985 ಜನರು ನವದೆಹಲಿಯ ರಾಜ್ ಪಥ್‌ನಲ್ಲಿ 35 ನಿಮಿಷ 21 ಆಸನಗಳನ್ನು ಪ್ರದರ್ಶಿಸಿದರು. ಇದನ್ನು ವಿಶ್ವದ ಲಕ್ಷಾಂತರ ಜನ ವೀಕ್ಷಿಸಿದರು. ಏಕಕಾಲದಲ್ಲಿ ಇದು ಎರಡು ಗಿನ್ನೆಸ್ ದಾಖಲೆಗಳನ್ನು ಬರೆಯಿತು. ಒಂದೇ ಬಾರಿಗೆ 35,985 ಜನರು ಯೋಗ ಅಭ್ಯಾಸ ಮಾಡಿದ್ದು ಮೊದಲ ದಾಖಲೆ ಆದರೆ, ಒಂದೇ ಬಾರಿಗೆ 84 ದೇಶದ ಪ್ರತಿನಿಧಿಗಳು ಯೋಗದಲ್ಲಿ ಭಾಗವಹಿಸಿದ್ದು ಮತ್ತೋಂದು ದಾಖಲೆಯಾಯಿತು.
ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ. ಯೋಗ ಕೇವಲ ವ್ಯಾಯಾಮವಲ್ಲ. ಇದು ವಿಶ್ವ ಮತ್ತು ಪ್ರಕೃತಿಯೊಂದಿಗೆ ನಮ್ಮತನವನ್ನು ಒಂದಾಗಿಸುವ ವಿದ್ಯೆಯಾಗಿದೆ. ಯೋಗವು ಬದುಕನ್ನು ಬದಲಿಸುವ ಮತ್ತು ಆತ್ಮಸಾಕ್ಷಿಯ ಸೃಷ್ಠಿ. ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ದೀಕರಿಸುವುದಾಗಿದೆ.
ಯೋಗವು ನಾವು ಮತ್ತು ಪ್ರಕೃತಿ ಮಾತೆಯ ಜೊತೆ ಸಂಪರ್ಕವನ್ನು ಕಲ್ಪಿಸುತ್ತದೆ. ಇದು ನಮ್ಮನ್ನು ನಮ್ಮ ನೈಜತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ. ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯನ್ನು ಅರ್ಥೈಸಿಕೊಳ್ಳಲು ಯೋಗ ನೆರವಾಗುತ್ತದೆ.
ನಮ್ಮ ಜೀವನ ಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹವಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೇಯೆ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ. ಯೋಗವು 6000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರತಿ ವರ್ಷ ಯೋಗದ ದಿನಾಚರಣೆಯು ಯೋಗ, ಧ್ಯಾನ ಸಭೆಗಳು ಚೆರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ವಿಶ್ವದ ಬಹುತೇಕ ರಾಷ್ಟçಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ.
ಬಾಲ್‌ರಾಜು. ಟಿ. ಎಸ್
ಪ್ರಶಿಕ್ಷಣಾರ್ಥಿ, ವಾರ್ತಾ ಇಲಾಖೆ