ಜೆಸಿಐ ಭಾವನ ಅಧ್ಯಕ್ಷರಾದ ರೇಖಾ ರಂಗನಾಥ್ ರವರಿಂದ ರಕ್ತದಾನ – ರಕ್ತದಾನ ಶಿಬಿರ ಉದ್ಘಾಟನೆ
ಜೆಸಿಐ ಭಾವನ ಶಿವಮೊಗ್ಗ ವತಿಯಿಂದ ರೆಡ್ ಕ್ರಾಸ್ ಸಂಜೀವಿನಿ ರಕ್ತ ನಿಧಿಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದು ಜೆಸಿಐ ಭಾವನ ಶಿವಮೊಗ್ಗ ಅಧ್ಯಕ್ಷರು ಹಾಗೂ ಮಾಜಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರವರು ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು.ನಂತರ ಅನೇಕ ಸದಸ್ಯರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಭಾವನ ಸದಸ್ಯರಾದ ವಂದನ ದಿನೇಶ್ , ವೈಷ್ಣವಿ, ನಿರೀಕ್ಷಾ, ಜನ್ಯ ರಂಗನಾಥ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.