ಇನ್ಸ್‌ಪೈಯರ್ ಎಂಬ ಕಾರ್ಯಕ್ರಮದಲ್ಲಿ “ಇಜ್ಞೆೈಟ್ ಮೈಂಡ್ ಇಜ್ಞೆೈಟ್ ಪಾಸಿಟಿವಿಟಿ” ಎಂಬ ಘೋಷ ವಾಕ್ಯದೊಂದಿಗೆ ವಿಶೇಷ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಡಳಿತ ಮತ್ತು ನಾಲ್ಕು ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ನಡೆದ ಶಿವಮೊಗ್ಗ ಜಿಲ್ಲೆಯ 32 ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು 259 ವಿದ್ಯಾರ್ಥಿ ನಿಲಯಗಳ 6ನೇ ತರಗತಿಯಿಂದ ಇಂಜಿನಿಯರಿಂಗ್ ಓದುತ್ತಿರುವ ಸುಮಾರು 12-13 ಸಾವಿರ ವಿದ್ಯಾರ್ಥಿಗಳೊಂದಿಗೆ ವಿಶೇಷವಾದ ಇನ್ಸ್‌ಪೈಯರ್ (Inspire) ಎಂಬ ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಮಕ್ಕಳ ತಜ್ಞರಾದ ಡಾ. ಧನಂಜಯ ಸರ್ಜಿರವರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಕಲಿಕೆಯ ವಿಧಾನ, ಶಿಸ್ತು ಪಾಲನೆ, ಸಮಯ ಪರಿಪಾಲನೆ, ವೈಯಕ್ತಿಕ ಶುಚಿತ್ವ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಕುರಿತು, ರಕ್ತದ ಒತ್ತಡ (ಬಿ.ಪಿ.), ಹೃದಯಾಘಾತವನ್ನು ತಡೆಯುವ ಕ್ರಮಗಳು, ಯೋಗನಿದ್ರೆ ಹಾಗೂ ಪ್ರತೀ ದಿನ ಕನಿಷ್ಟ 1 ರಿಂದ 2 ಗಂಟೆಗಳ ಪಠ್ಯತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದಾಗುವ ಉಪಯೋಗ ಮತ್ತು ಇತರೆ ಉಪಯುಕ್ತ ಮಾಹಿತಿಯನ್ನು ನೀಡಿದರು.