ಶಿವಮೊಗ್ಗ ನಗರದ ಬಂಜಾರ ಹಾಲ್ ನಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಉತ್ತರ ಕನ್ನಡ ಜಿಲ್ಲೆಯ ಪ್ರಬುದ್ಧರ ಸಭೆಯನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದ ಅವರು ಬಿಜೆಪಿ ಕೇಂದ್ರದಲ್ಲಿ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅದಕ್ಕೆ ಮೂಲ ಕಾರಣ ಅವರು ಮಾಡಿರುವ ದೇಶದಲ್ಲಿ ಅಭಿವೃದ್ಧಿಯ ಕೆಲಸ.ಕಾರ್ಯಕರ್ತರಾಗಿ ಉದ್ದೇಶ ಮತ್ತು ಗುರಿಯಿದೆ. ಇತರೆ ರಾಷ್ಟ್ರೀಯ ಪಕ್ಷದ ವ್ಯತ್ಯಾಸವೆಂದರೆ ಬಿಜೆಪಿ ಕಾರ್ಯಕರ್ತರಿಗೆ ರಾಷ್ಟ್ರೀಯತೆ ಮತ್ತು ರಾಷ್ಡ್ರೀಯ ವಿಷಯದ ಬಗ್ಗೆ ಬದ್ಧತೆಯಿದೆ ಎಂದು ಹೇಳಿದರು.

ಹಗಲು ರಾತ್ರಿ ಹೋರಾಟ ನಡೆಸಿಕೊಂಡು ಬಂದ ಬಿಜೆಪಿ ಕಾರ್ಯಕರ್ತರಿಗೆ ಔಪಚಾರಿಕತೆಯ ಬದ್ಧತೆ ಬೆಳೆಸಿಕೊಂಡು ಬಂದಿದ್ದೇವೆ. 2014 ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, 2019 ಮತ್ತು 2024 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದಿದೆ. ಮೂರನೇ ಬಾರಿಗೆ ಮೋದಿ ನೇತೃತ್ವದ ಸರ್ಕಾರ ಬಂದಿದೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ನಂತರ 67 ವರ್ಷ ಸುಧೀರ್ಘ ಆಧಿಕಾರಕ್ಕೆ ಬಂದಿದೆ. ಅದು ಅನುಕಂಪ ಮತ್ತು ಬೇರೆ ಆಧಾರದ ಮೇರೆ ಬಂದಿದೆ ಎಂದರು.

ಮೋದಿ ಸಕಾರಾತ್ಮಕ ಅಂಶ ಮತ್ತು ಅಭಿವೃದ್ಧಿಯ ಆಧಾರದ ಮೇಲೆ ಬಂದಿದೆ.ಅನುಪದ ಆಧಾರದ ಮೇರೆ ಬಂದಿಲ್ಲ. ಮೋದಿ ಯೋಜನೆ ಕಾರ್ಯಕ್ರಮವನ್ನ‌ ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕಿದೆ ಎಂದರು.

ಈ ಸಮಯದಲ್ಲಿ ಸಂಸದರಾದ ಬಿ ವೈ ರಾಘವೇಂದ್ರ ಅಧ್ಯಕ್ಷರಾದ ಜಗದೀಶ್ ಶಾಸಕರಾದ ಚನ್ನಬಸಪ್ಪ ಧನಂಜಯ್ ಸರ್ಜಿ ಡಿ ಎಸ್ ಅರುಣ್ ಮೋಹನ್ ರೆಡ್ಡಿ ಮಹಿಳಾ ಅಧ್ಯಕ್ಷರಾದ ಗಾಯತ್ರಿ ಶಾಂತ ಸುರೇಂದ್ರ ಮತ್ತು ಮೂರು ಜಿಲ್ಲೆಯ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.