ಅನವರತ ತಂಡದ ಗೌರವಾಧ್ಯಕ್ಷರಾದ ಚನ್ನಬಸಪ್ಪ ರವರು ಪತ್ರಿಕಾಗೋಷ್ಠಿ ನಡೆಸಿದರು. ಅನವರತ ತಂಡದಿಂದ ಗುರು ಪೂರ್ಣಿಮಾ ಅಂಗವಾಗಿ ಮಕ್ಕಳಿಗೆ ವಿಶೇಷ ಕಾರ್ಯಕ್ರಮಗಳು ರೂಪಿಸಿಕೊಂಡಿದ್ದೇವೆ ಎಂದರು.
- ಗುರುಪೂರ್ಣಿಮೆ – ಜ್ಞಾನ, ಸಂಸ್ಕೃತಿ ಮತ್ತು ಮಾರ್ಗದರ್ಶನದ ಪ್ರತೀಕವಾದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ವಿಶೇಷ ದಿನ.
- ಗುರುಪೂರ್ಣಿಮೆಯ ಈ ಪವಿತ್ರ ದಿನದಂದು, ನಾವೆಲ್ಲರೂ ಗುರುಹಿರಿಯರು ರೂಡಿಸಿಕೊಟ್ಟ ಸನಾತನ ಸಂಸ್ಕೃತಿಗೆ
ಶಿರಬಾಗಿಸಿ, ನಮ್ಮ ಸಂಸ್ಕೃತಿಯ ಚಿರಂತನ ಮೌಲ್ಯಗಳಿಗೆ ಕಟ್ಟುನಿಟ್ಟಾಗಿ ಬದ್ಧರಾಗೋಣ.
ಇಂದಿನ ವಿಶೇಷ
-ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಮಾನ ಮನಸ್ಕರ ತಂಡವಾಗಿರುವ “ಅನವರತ” ಈಗಾಗಲೇ ಮೂರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಾ ತಮ್ಮ ನಾಲ್ಕನೇ ಆಯಮದ ತಯಾರಿಯಲ್ಲಿ ತೊಡಗಿದೆ.
- ಅನವರತ ತಂಡವು ಯುವ ಪೀಳಿಗೆಯು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸದ ಕೊರತೆಯಿಂದ ಶೈಕ್ಷಣಿಕವಾಗಿ ಹಿಂದುಳಿಯಬಾರದು ಎಂಬ ಉದ್ದೇಶದೊಂದಿಗೆ ನಗರದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಕಿರು ಸಹಾಯವನ್ನು ನೀಡಲು ಸಂಕಲ್ಪ ಮಾಡಿಕೊಂಡಿದೆ.
“ವಿವೇಕ ವಿದ್ಯಾ ನಿಧಿ”
- ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಮಹಾನ್ ರಾಯಭಾರಿ ಶ್ರೀ ಸ್ವಾಮಿ ವಿವೇಕಾನಂದರ ಆದರ್ಶಗಳು, ಅವರ ದೃಷ್ಟಿಕೋನವು ಯುವಜನರು ಉನ್ನತ ಶಿಕ್ಷಣವನ್ನು ಪಡೆದು, ಅದರೊಂದಿಗೆ ಬಲವಾದ ರಾಷ್ಟ್ರೀಯ ಚಿಂತನೆ ಮತ್ತು ರಾಷ್ಟ್ರೀಯತೆಯ ಭಾವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿತ್ತು. ಅವರ ಆಶಯದಂತೆ ಈ ಮಹಾನ್ ಕಾರ್ಯಕ್ಕೆ ಅನವರತ ತಂಡವು “ವಿವೇಕ ವಿದ್ಯಾ ನಿಧಿ” ಎಂಬ ಹೆಸರನ್ನಿಡುವ ಮೂಲಕ ಈ ಕಾರ್ಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಲು ಮುಂದಾಗಿದೆ.
ಏನಿದು ವಿವೇಕ ವಿದ್ಯಾ ನಿಧಿ?
- ಪ್ರಸಕ್ತ ಸಾಲಿನಲ್ಲಿ ಓದುತ್ತಿರುವಂತಹ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಕಳೆದ ಸಾಲಿನಲ್ಲಿ ಶೇಕಡ 50% ರಿಂದ 75% ವರೆಗೆ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ – ಪ್ರಸಕ್ತ ಸಾಲಿನಲ್ಲಿ ಇನ್ನು ಹೆಚ್ಚು ಅಂಕ ಪಡೆಯಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅವರ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುವಂತೆ ಆರ್ಥಿಕ ನೆರವು ನೀಡುವುದು.
- ಸಮಾಜದಲ್ಲಿನ ಅನೇಕ ಕೊಡುಗೈ ದಾನಿಗಳನ್ನು ಈ ಶ್ರೇಷ್ಠ ಕಾರ್ಯದಲ್ಲಿ ಜೋಡಿಸಿಕೊಂಡು ವಿದ್ಯಾರ್ಥಿಯ ಭವಿಷ್ಯ ರೂಪಿಸುವಲ್ಲಿ ಸಮಾಜದ ಪಾತ್ರವನ್ನು ನೆನಪಿಸುವುದರ ಜೊತೆಗೆ ಈ ವಿದ್ಯಾನಿಧಿಯು ಅವರ ಉನ್ನತ ಶಿಕ್ಷಣದ ಕನಸಿಗೆ ಒಂದು ಸಣ್ಣ ಬೆಂಬಲವಾಗಲಿದೆ .
- ಒಟ್ಟಾರೆ, ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲಕ್ಕಾಗಿ 5000/- ರೂಗಳ ವಿದ್ಯಾರ್ಥಿ ವೇತನ ಒದಗಿಸುವುದು.
“ವಿವೇಕ ವಿದ್ಯಾ ನಿಧಿಗೆ ಯಾರು ಅರ್ಹರು?”
- ಪ್ರಸ್ತುತ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು.
- ಹಿಂದಿನ ವರ್ಷ ಅಂದರೆ 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ತರಗತಿಗಳಲ್ಲಿ ಶೇಕಡ 50 ರಿಂದ 75% ಹೊಂದಿರಬೇಕು.
- ಪೋಷಕರ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ ಹೊಂದಿರಬೇಕು. (ಅವರ ಆದಾಯವು 1,80,000 ರೂ ಗಿಂತ ಕಡಿಮೆ ಇರಬೇಕು.)
- ವಾರ್ಷಿಕ ವರ್ಷದಲ್ಲಿ ಓದುತ್ತಿರುವ ಶಾಲೆ/ಕಾಲೇಜಿನ ಶುಲ್ಕವು 30,000/- ರೂಪಾಯಿ ಮೀರಿರಬಾರದು.
- ಪೋಷಕರು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು.
ವಿವೇಕ ವಿದ್ಯಾನಿಧಿ ಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?
- ವಿವೇಕ ವಿದ್ಯಾನಿಧಿ ಅರ್ಜಿಗಳನ್ನು ಶಾಸಕರ ಕಛೇರಿ ಕರ್ತವ್ಯ ಭವನದಲ್ಲಿ ಮಾತ್ರ ನೀಡಲಾಗುವುದು.
- ವಿವೇಕ ವಿದ್ಯಾನಿಧಿ ಅರ್ಜಿಗಳನ್ನು ಜುಲೈ 11 ರಿಂದ ಆಗಸ್ಟ್ 15 ರವರೆಗೆ ಶಾಸಕರ ಕಚೇರಿ ಕರ್ತವ್ಯ ಭವನದಲ್ಲಿ ನೀಡಲಾಗುವುದು.
- ಭರ್ತಿ ಮಾಡಿದ ಅರ್ಜಿಗಳನ್ನು ಆಗಸ್ಟ್ 31ರ ಒಳಗಾಗಿ ಕರ್ತವ್ಯ ಭವನಕ್ಕೆ ನೀಡಬೇಕು.
ಆಯ್ಕೆ ಮಾಡಲಾದ ವಿದ್ಯಾರ್ಥಿಗಳಿಗೆ ವಿವೇಕ ವಿದ್ಯಾನಿಧಿ ಅನ್ನು ಅಕ್ಟೋಬರ್ / ನವಂಬರ್ ತಿಂಗಳಿನಲ್ಲಿ ಕಾರ್ಯಕ್ರಮದ ಮೂಲಕ ನೀಡಲಾಗುವುದು ಎಂದರು.