ನಿರಂತರ ಸಂಸ್ಥೆ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಪೋಷಕರಿಗೆ ಪಾದ ಪೂಜೆ ಮಾಡಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಿರಂತರ ಸಂಸ್ಥೆಯ ಸಂಸ್ಥಾಪಕರಾದ ಚೈತ್ರ ಸಜ್ಜನ್, ಸಂಪನ್ಮೂಲ ವ್ಯಕ್ತಿಯಾದ ನಾಗರಾಜ್, ಶಾಲೆಯ ಪ್ರಾಂಶುಪಾಲರಾದ ರೇಣುಕಾರಾಧ್ಯ, ಹಾಗೂ ಜಗದೀಶ್ ಸಂಪಳ್ಳಿ ಹಾಗೂ ನಿರಂತರ ಸಂಸ್ಥೆಯ ಸದಸ್ಯರಾದ ಬಾಬು, ಅಭಿಷೇಕ್, ಜನ್ಯ ರಂಗನಾಥ್, ದಿವ್ಯ, ಪೋಷಕರು ಹಾಗೂ ಶಾಲೆಯ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.