ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ನೂತನ ಅಧ್ಯಕ್ಷರಾದ ರಮೇಶ್ ಶೆಟ್ಟಿ ಶಂಕರಘಟ್ಟ ರವರು ಹಿಂದುಳಿದ ನಾಯಕ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹರಿದು ಹಂಚಿ ಹೋಗಿರುವ ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಗೊಳಿಸಿ ಎಂದು ನೂತನ ಅಧ್ಯಕ್ಷರಿಗೆ ತಿಮ್ಮಪ್ಪ ನವರು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಾಗರ ಬ್ಲಾಕ್ ಓಬಿಸಿ ಅಧ್ಯಕ್ಷರಾದ ಶಂಕರ್ ವಿ, ಕಾರ್ಯದರ್ಶಿ ನವೀನ್ ಕುಮಾರ್, ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾರ್ಯದರ್ಶಿ ಎಚ್ಆರ್ ಮಹೇಂದ್ರ ಹಾಗೂ ನಗರದ ಮಹಾದೇವಪ್ಪ ರವರು ಉಪಸಿತರಿದ್ದರು.