ಶಿವಮೊಗ್ಗ ನಗರದ ಹರಿಗೆ ಎಂಆರ್‌ಎಸ್ ಕಾಂಪೌಂಡ್ ಗೆ ಹೊಂದಿಕೊಂಡಂತೆ ಇರುವ ನಿರ್ಮಾಣ ಹಂತದಲ್ಲಿರುವ ವಡ್ಡಿನಕೊಪ್ಪ ರಂಗನಾಥ ಲೇಔಟ್‌ನ ಕೋಳಿಫಾರಂ ಶೆಡ್ ನ ಹತ್ತಿರ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಶ್ರೀ ಮಿಥುನ್ ಕುಮಾರ್ ಜಿ. ಕೆ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಮತ್ತು ಶ್ರೀ ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1, ಶಿವಮೊಗ್ಗ ಜಿಲ್ಲೆ ಹಾಗೂ ಶ್ರೀ ಕಾರಿಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು-2, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕೃಷ್ಣಮೂರ್ತಿ ಕೆ ಪೊಲೀಸ್ ಉಪಾಧೀಕ್ಷಕರು ಸಿಇಎನ್ ಕ್ರೈಂ ಪೊಲೀಸ್ ಠಾಣೆ ರವರ ಮಾರ್ಗದರ್ಶನದಲ್ಲಿ, ಶ್ರೀ ಮಂಜುನಾಥ ಪೊಲೀಸ್‌ ನಿರೀಕ್ಷಕರು ಸಿಇಎನ್ ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳಾದ ಶೇಖರ್ ಎಎಸ್ಐ, ಧರ್ಮಾ ನಾಯ್ಕ ಹೆಚ್‌ಸಿ, ಅವನಾಶ ಹೆಚ್‌ಸಿ, ನಾರಾಯಣ ಸ್ವಾಮಿ ಪಿಸಿ, ಪಿರ್ ದೊಸ್‌ ಅಹಮದ್‌ ಪಿಸಿ, ರವಿ ಬಿ ಪಿಸಿ, ಆಂಡ್ರ್ಯೂಸ್ ಜೊನ್ಸ್ ಪಿಸಿ, ಪ್ರಮೋದ್‌ ಎಲ್ ಬಿ ಪಿಸಿ ಮತ್ತು ಸಂಗಮೇಶ ಬಿ ಸಿಪಿಸಿ ತಂಡವು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಗಳಾದ ಎ1. ಕಾರ್ತಿಕ್ ವಿ. @ ಸಾಪಡ್, 21 ವರ್ಷ, ಗಾರೆ ಕೆಲಸ, ವಾಸ: ಜಲ್ಲಿ ಮೆಷಿನ್, 1 ನೇ ತಿರುವು, ಎ ಬ್ಲಾಕ್, ಆಶ್ರಯ ಬಡಾವಣೆ, ಬೊಮ್ಮನಕಟ್ಟೆ, ಶಿವಮೊಗ್ಗ

ಎ2. ಎನ್ ರಾಜೇಶ್. @ ರಾಜು, 24 ವರ್ಷ, ಪಿಓಪಿ ಕೆಲಸ, ವಾಸ ಕಾಳಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ, ಕಡೇಕಲ್, ಶಿವಮೊಗ್ಗ ಇವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 1,70,000/- ರೂಗಳ 5 ಕೆಜಿ 780 ಗ್ರಾಂ ತೂಕದ ಒಣ ಗಾಂಜಾ ಹಾಗೂ ಒಂದುಬೈಕ್‌ ನ್ನು ಅಮಾನತ್ತು ಪಡಿಸಿಕೊಂಡು ಠಾಣಾ ಗುನ್ನೆ ನಂ 67/2025 ಕಲಂ 20(b)(ii)(B) ರ ರೀತ್ಯಾ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡೆಸಿದ್ದು ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ನೀಡಿರುತ್ತಾರೆ.