ಕದಂಬ ಕನ್ನಡ ವೇದಿಕೆ ವತಿಯಿಂದ ಕಟ್ಟಡಗಳ ಸೆಟ್ ಬ್ಯಾಕ್ ಉಲ್ಲಂಘನೆ ವಿರುದ್ಧ ಕ್ರಮ ಜರುಗಿಸುವಂತೆ ಮಹಾನಗರ ಪಾಲಿಕೆ ಆಯ್ತ್ರದ ಮಾಯಣ್ಣ ಗೌಡರಿಗೆ ಮನವಿ ಸಲ್ಲಿಸಿದರು.
ನಗರದ ವಾಣಿಜ್ಯ ಮಳಿಗೆಗಳು ಹಾಗೂ ಕಾಂಪ್ಲೆಕ್ಸ್ ಗಳು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ವಸತಿ ಗೃಹಗಳು ಲಘು ವಾಹನಗಳ ನಿಲುಗಡೆಗೆ ಅವಕಾಶ ನೀಡದೆ ಕಮರ್ಷಿಯಲ್ ಆಗಿ ಪರಿವರ್ತನೆ ಮಾಡಿಕೊಂಡಿರುವುದು ನಮ್ಮ ಸಂಘಟನೆಯು ಕಂಡಿದೆ.ಈ ಹಿನ್ನೆಲೆಯಲ್ಲಿ ಯಾವ ಕಟ್ಟಡಗಳು ಉಲ್ಲಂಘಿಸಿವೆ ಅವುಗಳ ವಿರುದ್ಧ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳುವಂತೆ ವೇದಿಕೆ ಆಗ್ರಹಿಸಿದರು.
ಸೆಟ್ ಬ್ಯಾಂಕಿಗೆ ಅವಕಾಶ ಮಾಡಿಕೊಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಕದಂಬ ವೇದಿಕೆಯ ರಾಜ್ಯದ್ಯಕ್ಷ ವಿಶ್ವನಾಥ್ ಗೌಡ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ನವೀನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಘವೇಂದ್ರ ಎಸ್ ಜಿಲ್ಲಾ ಸಹಕಾರ್ಯದರ್ಶಿ ಗಂಗಾಧರ ನಗರ ಸಂಚಾಲನ ಕಾರ್ಯದರ್ಶಿ ಲಕ್ಷ್ಮಣ ಎಸ್ ರುದ್ರೇಶ್ ಮುಂತಾದವರು ಉಪಸ್ಥಿತರಿದ್ದರು.