ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನೂತನವಾಗಿ ಅಧ್ಯಕ್ಷರಾದ ಬಸವರಾಜ್ ಕಾರ್ಯದರ್ಶಿ ಜಯಶೀಲ ಶೆಟ್ಟಿ ರವರು ಮೊದಲ ಬಾರಿಗೆ ಸರ್ಕಾರಿ ಶಾಲೆಗೆ ಮಕ್ಕಳಿಗೆ ಮುಖ್ಯ ಉಪಯೋಗಿಸುವ ವಸ್ತುಗಳು ನೀಡಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಮತ್ತು ಧಾನಿಗಳಾದ ಶ್ರೀಯುತ ನಾರಾಯಣ ಮೂರ್ತಿ ನಗರದ ವಿನೋಬನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಊಟದ ತಟ್ಟೆ ಮತ್ತು ಲೋಟವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಸವರಾಜ್ ಕಾರ್ಯದರ್ಶಿಯಾದ ಜಯಶೀಲ ಶೆಟ್ಟಿ , ನಾರಾಯಣ ಮೂರ್ತಿ , ರಾಜೇಶ್ವರಿ ಬಸವರಾಜ್ , ದೀಪಾ ಜಯಶೀಲ ಶೆಟ್ಟಿ ,ಕಿರಣ್ ಕುಮಾರ್ ,ರವಿ ಕೋಟಜಿ , ಧರ್ಮೇಂದ್ರ ಸಿಂಗ್ , ರಮೇಶ್ , ಮಧುರ ಧನಂಜಯ್ , ವಿನುತಾ ಅಶ್ವಿನ್ , ಮೋಹನ್ ಕುಮಾರ್ ,ಗುರುರಾಜ್ , ಸಂತೋಷ್ , ಸರೋಜಮ್ಮ ಮುಂತಾದವರು ಉಪಸ್ಥಿತರಿದ್ದರು.