ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಯ ವತಿಯಿಂದ ಕೆಎಸ್ಸಾರ್ಟಿಸಿ ವಿಭಾಗೀಯ ಆಯುಕ್ತರಿಗೆ ರೈಲ್ವೆ ನಿಲ್ದಾಣಕ್ಕೆ ನಗರ ಸಾರಿಗೆ ಬಸ್ ಬಿಡಲು ಮನವಿ ನೀಡಿದರು.
ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಪದಾಧಿಕಾರಿಗಳು 19ರ ಶನಿವಾರ ಶಿವಮೊಗ್ಗ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ವಿಭಾಗೀಯ ಆಯುಕ್ತರಾದ ನವೀನ್ ಟಿ.ಆರ್. (ಸಂಚಾರ ನಿಯಂತ್ರಣ) ರವರನ್ನು ಬೇಟಿ ಮಾಡಿ, ಮಹಾನಗರ ಪಾಲಿಕೆಯಾಗಿರುವ ಶಿವಮೊಗ್ಗ, ನಗರದ ವ್ಯಾಪ್ತಿಯು ಬಹಳ ಬೆಳೆದಿದ್ದು ನಗರದ ವಿವಿಧ ಭಾಗಗಳಿಂದ ಅದರಲ್ಲೂ ವಿಶೇಷವಾಗಿ KSRTC ಬಸ್ ನಿಲ್ದಾಣದಿಂದ ಸುಮಾರು 4 ಕಿ ಮೀ ದೂರವಿರುವ ಶಿವಮೊಗ್ಗ, ಟೌನ್ ರೈಲು ನಿಲ್ದಾಣಕ್ಕೆ ರೈಲು ಹೊರಡುವ ಹಾಗು ಬರುವಾಗ ನಿಗಮದ ಬಸ್ ಗಳನ್ನು ಎರಡೂ ದಿಕ್ಕಿನಲ್ಲಿ ಸಂಚಾರ ಮಾಡುವುದರಿಂದ ಪ್ರಯಾಣಕರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖ್ಯಸ್ಥರು ಸುತ್ತ ಮುತ್ತಲಿನ ತಾಲ್ಲೂಕುಗಳಿಂದ ಸಾರ್ವಜನಿಕರು ಬೈಪಾಸ್ ಮೂಲಕ ಬಸ್ ನಿಲ್ದಾಣಕ್ಕೆ ಬರುತ್ತಾರೆ, ಅವರಿಗೆ ಇಲ್ಲಿಂದ ರೈಲು ಬರುವ ಹಾಗೂ ಹೋಗುವ ಅರ್ಧ ಘಂಟೆ ಮುಂಚಿತ ತಲುಪುವಂತೆ ಬಸ್ ಸಂಚರಿಸಲಿ ಹಾಗೂ ಶಿಕಾರಿಪುರ, ಸೊರಬ, ತೀರ್ಥಹಳ್ಳಿ ಇತರೆ ತಾಲೂಕಿಗೂ ಅ ಸಂದರ್ಭದಲ್ಲಿ ಇಲ್ಲಿಂದ ಬಸ್ ಹೊರಡುವಂತೆ ಅವಕಾಶ ಕಲ್ಪಿಸಬೇಕು ಹಾಗೂ ಇತರೆ
ರಾಜ್ಯಗಳಲ್ಲಿ ಶೌಚಾಲಯಗಳ ಸ್ವಚ್ಛತೆಗೆ ಯಂತ್ರಗಳನ್ನು ಬಳಸುತ್ತಿದ್ದು ಸಾರ್ವಜನಿಕರಿಗೆ ಉಚಿತ ಶೌಚಾಲಯ ಕಲ್ಪಿಸಿದ್ದು ಅದರಂತೆ ಇಲ್ಲಿ ಕೂಡ ಉಚಿತ ಶೌಚಾಲಯ ಸಾರ್ವಜನಿಕರಿಗೆ ಕಲ್ಪಿಸಿ ಕೊಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ನಾಗರಾಜ್ ಗೋರೆ, ಸೀತಾರಾಮ್, ರಘುಪತಿ, ವಿನೋದ್ ಪೈ, ಚನ್ನವೀರಪ್ಪ ಗಾಮನಗಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.