ಅಮೃತ ಅನ್ನದಾಸೋಹ ಪ್ರತಿಷ್ಠಾನದಲ್ಲಿ ಸ್ಟೇಡಿಯಂ ಗೆಳೆಯರ ಬಳಗ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿ ರವರ ಹುಟ್ಟು ಹಬ್ಬದ  ಪ್ರಯುಕ್ತ ಅನ್ನದಾನ ಕಾರ್ಯಕ್ರಮ ನಡೆಯಿತು.

ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಸತತವಾಗಿ 90 ದಿನದಿಂದ ಆಸ್ಪತ್ರೆಯಲ್ಲಿ ಇರುವ ರೋಗಿಗಳ ಸಂಬಂಧಿಕರಿಗೆ ಮತ್ತು ಸಾರ್ವಜನಿಕರಿಗೆ ಪ್ರತಿ ಬುಧವಾರ ಮತ್ತು ಶುಕ್ರವಾರ ಸುಮಾರು 500ಕ್ಕೂ ಹೆಚ್ಚು ಜನರಿಗೆ ದಾಸೋಹದ ವತಿಯಿಂದ ಅನ್ನದಾನ ಮಾಡುತ್ತಿದ್ದಾರೆ.

ಷಡಕ್ಷರಿ ರವರ ಹುಟ್ಟುಹಬ್ಬ ಪ್ರಯುಕ್ತ  ಸ್ಟೇಡಿಯಂ ಗೆಳೆಯರ ಬಳಗ ವತಿಯಿಂದ 1000 ಹೆಚ್ಚು ರೋಗಿಗಳ ಸಂಬಂಧಿಕರಿಗೆ ಮತ್ತು ಸಾರ್ವಜನಿಕರಿಗೆ ಅನ್ನದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಷಡಕ್ಷರಿ ರವರು ನೆನ್ನೆ ದಿವಸ ಸರ್ಕಾರಿ ನೌಕರ ಭವನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಮತ್ತು ಶಿವಮೊಗ್ಗ ಜಿಲ್ಲೆಯಿಂದ ಪ್ರಮುಖ ನೌಕರರು ವಿಶೇಷ ರೀತಿಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿದರು.ಇವತ್ತು ಸ್ಟೇಡಿಯಂ ಗೆಳೆಯರ ಬಳಗ ವತಿಯಿಂದ ಅಮೃತ ಅನ್ನದಾಸಹ ಪ್ರತಿಷ್ಠಾನ ಅಡಿಯಲ್ಲಿ ಸಾರ್ವಜನಿಕರಿಗೆ ಅನ್ನದಾನ ಮಾಡುವ ಮೂಲಕ ವಿಶೇಷ ಕಾರ್ಯಕ್ರಮ ಮಾಡಿದ್ದಾರೆ. ಎಲ್ಲಾ ಸ್ನೇಹಿತರು ಹಿತೈಷಿಗಳು ಗೆಳೆಯರ ಬಳಗದ ಸಮಸ್ತರಿಗೆ ಹೃದಯಪೂರ್ವಕಾಗಿ ಧನ್ಯವಾದಗಳು ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ದಾಸೋಹದ ಮುಖಂಡರು ಪದಾಧಿಕಾರಿಗಳು ಮತ್ತು ಅಭಿಮಾನಿ ಸಂಘದ ಮುಖಂಡರು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.