ಭಾರತ್ ಎಲೆಕ್ಟಾçನಿಕ್ಸ್ ಲಿಮಿಟೆಡ್, ಬೆಂಗಳೂರು ಇವರು 10 ಖಾಯಂ ಚಾಲಕ ಹುದ್ದೆಗಳನ್ನು ತುಂಬಲು ಮಾಜಿ ಸೈನಿಕರಿಂದ ಆಹ್ವಾನಿಸಿದ್ದಾರೆ.
43 ವರ್ಷದೊಳಗಿನ ಎಸ್‌ಹೆಚ್‌ಎಪಿಇ-1 ಮೆಡಿಕಲ್ ಕ್ಯಾಟಗರಿ ಹೊಂದಿರುವ ಮಾಜಿ ಸೈನಿಕರು ಅರ್ಜಿ ಸಲ್ಲಿಸಬಹುದು. ವೇತನ ಶ್ರೇಣಿ 20500-3%-7900 ಮತ್ತು ಇತರೆ ಭತ್ಯೆಗಳು ಅನ್ವಯವಾಗುತ್ತವೆ. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಹಾಗೂ ಕನ್ನಡ ಭಾಷಾ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು. ಅರ್ಜಿ ಸಲ್ಲಿಸಲು ಆಗಸ್ಟ್ 6 ಕಡೆಯ ದಿನವಾಗಿರುತ್ತದೆ.


ಅರ್ಜಿಯನ್ನು ವೆಬ್‌ಸೈಟ್ www.bel-india.in/careers ನಲ್ಲಿ ಸಲ್ಲಿಸಬಹುದಾಗಿದ್ದು ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ 080-22195650 ನ್ನು ಸಂಪರ್ಕಿಸಬಹುದೆAದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ(ಪ್ರ) ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ.