ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಘಟಕ ವತಿಯಿಂದ ಪತ್ರಿಕಾ ದಿನಾಚರಣೆ ಪ್ರತಿಭಾ ಪುರಸ್ಕಾರ ಹಲವರು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ದೇಶಕ್ಕೆ ಸ್ವಾತಂತ್ರ್ಯ, ಅಂಬೇಡ್ಕರ್ ನೀಡಿರುವ ಸಂವಿಧಾನ, ಇತಿಹಾಸ ಇವುಗಳ ಕುರಿತು ಸಮಾಜಕ್ಕೆ ಎಚ್ಚರಿಸುವ, ತಿಳಿಸುವ ಕೆಲಸವನ್ನು ಪತ್ರಕರ್ತರು ಮಾಡಲು ದಿಟ್ಟ ಹೆಜ್ಜೆ. ಯಾವುದೇ ಸವಾಲುಗಳು ಬಂದರೂ ಕೂಡ ದಿಟ್ಟವಾಗಿ ಎದುರಿಸುವಂತಹ ಕೆಲಸವನ್ನು ಪತ್ರಕರ್ತರು ಮಾಡಿದ್ದಾರೆ.
ವಿಶೇಷವಾದ ಲೇಖನಿ ಮೂಲಕ ರಾಷ್ಟ್ರವನ್ನು ತಿದ್ದುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮ ಪತ್ರಿಕಾ ಮಾಧ್ಯಮಗಳ ಲೇಖನಗಳು ಜನರಿಗೆ ಇವತ್ತಿಗೂ ಕೂಡ ಆಗಬೇಕಾಗಿದೆ. ಅದರ ಸಮಾಧಾನಕರ ತೃಪ್ತಿ ಈಗೀನ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವುದಿಲ್ಲ. ಪತ್ರಿಕೆ ಯಾವತ್ತಿಗೂ ಹಳೆಯದಾಗಲೂ ಸಾಧ್ಯವಿಲ್ಲ. ನಿಮ್ಮ ಲೇಖನಿ ಸಿದ್ಧಾಂತಗಳು ಬೇರೆ ಬೇರೆ ಇದ್ದರು ಸಹ ಸತ್ಯಾ ಸತ್ಯಾತತೆಯನ್ನು ತಿಳಿಸುವ ಕೆಲಸವನ್ನು ಮಾಡಬೇಕು.
ಗಾಂಧೀಜಿ, ನೆಹರೂ ಸೇರಿದಂತೆ ಹಲವರು ಪತ್ರಕರ್ತರಿದ್ದಾರೆ. ಸತ್ಯಾಸತ್ಯತೆಯನ್ನು ಸಮಾಜಕ್ಕೆ ತಿಳಿಸುವ ಕೆಲಸ ಇನ್ನೂ ಆಗಬೇಕಿದೆ. Aa ನಿಟ್ಟಿನಲ್ಲಿ ನಿಮ್ಮ ಲೇಖನಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಆಗಲಿ.
ಸಮಾಜದಲ್ಲಿ ನೀವು ಒಬ್ಬಂಟಿಯಲ್ಲ, ನಿಮ್ಮ ಜೊತೆ ಸರ್ಕಾರ ಇರುತ್ತದೆ ಎಂದು ಹೇಳಿದರು.
ದಿಕ್ಸೂಚಿ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ನಾವು ಆಡುವ ಮಾತುಗಳು ನಮಗೆ ಸಂಭ್ರಮ ಕೊಡಬೇಕು, ಸಂತೋಷ ಕೊಡಬೇಕು. ಆದರೆ ಸಾಮಾನ್ಯವಾಗಿ ಮಾಧ್ಯಮಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಾಗ ಒಳ್ಳೆಯ ಅಭಿಪ್ರಾಯ ಇಲ್ಲ. ನನ್ನು ಈ ಮನೆಯ ಸದಸ್ಯ.
ಪತ್ರಕರ್ತರ ವೃತ್ತಿಯಲ್ಲಿ ನಿಮ್ಮ ಮನೆಯವಈಗೆ ಅಭಿನಂದನೆ ಸಲ್ಲಿಸಬೇಕು. ಪತ್ರಕರ್ತರು ಮತ್ತು ಪೊಲೀಸರಿಗೆ ಹಬ್ಬ ಹರಿದಿನಗಳಲ್ಲಿ ಕೆಲಸ ಜಾಸ್ತಿ. ಇದನ್ನು ಸಮಾಜ ಅರ್ಥ ಮಾಡಿಕೊಳ್ಳುವುದು ಬಹಳ ಕಡಿಮೆ.
ಉಳಿದವರ ಕಷ್ಟವನ್ನು ಪತ್ರಕರ್ತರು ಬರೆಯುತ್ತಾರೆ. ಆದರೆ ಪತ್ರಕರ್ತರ ಕಷ್ಟವನ್ನು ಯಾರು ಬರೆಯುತ್ತಾರೆ. 82 ಸಾವಿರ ಪತ್ರಿಕೆಗಳು ಇವೆ. 800 ಟಿವಿ ಚಾನೆಲ್ ಗಳಿವೆ. ಆದರೆ ಮಧ್ಯಮ ಕ್ಷೇತ್ರದ ಬಗ್ಗೆ ಬಂದಾಗ ಯಾರು ಕೂಡ ಒಳ್ಳೆಯ ಅಭಿಪ್ರಾಯದಲ್ಲಿ ಮಾತನಾಡುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಆದರೆ ಯಾರಿಗೆ ಇದೆ,
ರಾಜಕಾರಣಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಆದರೆ ಮತದಾರನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯಾ ಎಂಬುದು ಪ್ರಶ್ನೆಯಾಗುತ್ತದೆ. ಒಬ್ಬ ರೈತ, ಕಾರ್ಮಿಕ, ಮತದಾರ, ದೇವರ ಭಕ್ತ,
ಮಾಧ್ಯಮ ಕ್ಷೇತ್ರದ ದೊಡ್ಡ ಶತ್ರುಗಳು ರಾಜಕಾರಣಿಗಳು ಅಲ್ಲ. ರಾಜಕಾರಣಿಗಳಿಗೆ ನೀವು ಎಷ್ಟಾದರೂ ಬೈದರೂ ಸಹ ದಕ್ಕಿಸಿಕೊಳ್ಳಬಹುದು. ಆದರೆ ಧರ್ಮ ಗುರುಗಳಿಗೆ ಮುಟ್ಟಿದರೆ ನನಗೆ ನೋಟಿಸ್ ಬರುತ್ತದೆ. ನಿಮ್ಮ ತಲೆಗಳು ಹೋಗುತ್ತವೆ. ಮಾಧ್ಯಮ ನಿಜವಾದ ಉದ್ಯಮವಾಗಬೇಕು. ಇವತ್ತಿನ ಪರಿಸ್ಥಿತಿ ಲಾಭದ ಉದ್ದೇಶ ಹೊಂದಿಲ್ಲ. ಅದಾನಿ ಅಂಬಾನಿಯವರಿಗೆ ಸಾಮ್ರಾಜ್ಯ ರಕ್ಷಿಸಿಕೊಳ್ಳುವ ಅವಶ್ಯಕತೆ ಇದೆ. ಮಾಧ್ಯಮ ಧರ್ಮಗುರುಗಳ ಆಯುಧ ಆಗಿದೆ. ಅದನ್ನು ಪ್ರಯೋಗ ಮಾಡುತ್ತಿದ್ದಾರೆ. ದೇವರು ಬೇರೆ ಧರ್ಮ ಗುರುಗಳು, ದೇವರಿಗೆ ಅನ್ಯಾನ ಆಗುತ್ತಿದೆ ಎಂದು ಧರ್ಮಗುರುಗಳ
ಮಾಧ್ಯಮ ಕೆಲವರ ಉದ್ಯಮ ಆಗಿದೆ. ಒಮ್ಮೆ ವಿಶ್ವಾಸಾರ್ಹತೆಯನ್ನು ಕೊಂದರೆ ಜನ ನಂಬುವುದಿಲ್ಲ. ಕೆಲವೊಂದು ಇಂಗ್ಲಿಷ್ ಪತ್ರಿಕೆಗಳು, ಕನ್ನಡ ಪತ್ರಿಕೆಗಳು ದೋಣಿ ಮಗುಚದಂತೆ ಕಾರ್ಯನಿರ್ವಹಿಸುತ್ತಿವೆ. ಒಮ್ಮೆ ವಿಶ್ವಾಸವನ್ನು ಕಳೆದುಕೊಂಡರೆ ಜನರು ಕಾಲಕ್ರಮೇಣ ಪತ್ರಿಕೆಯನ್ನು ನಂಬುವುದಿಲ್ಲ.ಒಬ್ಬ ಪ್ರಾಮಾಣಿಕ ಪತ್ರಕರ್ತ ಪತ್ರಿಕೆ ನಡೆಸಲು ಆರಂಭಿಸಿದರೆ, ಆತ ನಡೆಸಲು ಸಾಧ್ಯವಾಗುವುದಿಲ್ಲ.ಮಾಧ್ಯಮದಲ್ಲಿ ಯಾರ ನಿಯಂತ್ರಣ ಇದೆ.
ಕಳೆದ 20-30 ವರ್ಷಗಳಲ್ಲಿ ಮಾಧ್ಯಮ ಬದಲಾಗಿದೆ. ರೈತನ ಬೆಳೆ ಮತ್ತು ಪತ್ರಿಕೆ ಒಂದೇ ಆಗಿದೆ.ಓದುಗನ ಹಣದಿಂದ ಪತ್ರಿಕೆ ನಡೆಸುವುದು ಆಗಲ್ಲ.
ಮಾಧ್ಯಮದ ಮಾಡೆಲ್ ನಲ್ಲಿಯೇ ತಪ್ಪಿದೆ. ಇದನ್ನು ತಿಳಿಯದೆ ಸಾರ್ವಜನಿಕರು ತಪ್ಪು ಅಭಿಪ್ರಾಯ ಹೊಂದಿದ್ದಾರೆ.ಸಾಮಾನ್ಯ ಮನುಷ್ಯನಿಗೆ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯ ಪತ್ರಕರ್ತನಿಗೆ ಇದೆ.
ಮಾಧ್ಯಮವನ್ನು ನಾಲ್ಕನೇ ಅಂಗ ಎಂದು ಬಹಳ ಕಡೆ ಹೇಳುತ್ತಾರೆ.
ಮೂರು ಅಂಗಗಳಿಗೆ ಸರ್ಕಾರದ ತೆರಿಗೆ ಹಣದಿಂದ ಸಂಬಳ ನೀಡಲಾಗುತ್ತದೆ. ಆದರೆ ಪತ್ರಕರ್ತರಿಗೆ ರಕ್ಷಣೆ ಇಲ್ಲ.ಅತಿಯಾಗಿ ಬೆಳೆಯುವುದಕ್ಕೆ ಬಿಡುವುದಿಲ್ಲ. ಮೊದಲೆಲ್ಲ ಓದುಗರಿಗೆ ಧ್ವನಿ ಇರಲಿಲ್ಲ. ಆದರೆ ಈಗ ಓದುಗನಿಗೆ ಧ್ವನಿ ಇದೆ. ಸಾಮಾಜಿಕ ಜಾಲತಾಣಗಳಿಂದ ಇಬ್ಬರ ತಪ್ಪನ್ನು ಪ್ರಶ್ನೆ ಮಾಡುವ ಧ್ವನಿ ಬಂದಿದೆ.ಉತ್ತರದಾಯಿತ್ವ, ಪಾರದರ್ಶಕತೆ ಇದೆ. ಎಷ್ಟೋ ವೈರಲ್ ಪೋಸ್ಟ್ ಗಳಿಂದ ಒಳ್ಳೆಯದು ಕೂಡ ಆಗಿದೆ. ಜಗತ್ತಿನ ಜ್ಞಾನ ಬೆರಳ ತುದಿಯಲ್ಲಿದೆ. ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರೆದಿದ್ದರೂ ಸಹ ಬೆಳಗ್ಗೆ ಪತ್ರಿಕೆ ಓದಿದರೆ ಸಮಾಧಾನ ತೃಪ್ತಿ. ಪ್ರಸ್ತುತ ಆಳವಾದ ಅಧ್ಯಯನ ಬೇಕಾಗಿಲ್ಲ.
ಸಮಾಜದಲ್ಲಿ, ರಾಜಕೀಯದಲ್ಲಿ ಸುಧಾರಣೆ ಆಗಬೇಕು.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಇಡೀ ರಾಜ್ಯದಲ್ಲಿನೆಲ್ಲ ಜಿಲ್ಲೆಯಲ್ಲಿ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪತ್ರಿಕಾ ಭವನ ಆಗಬೇಕು. ಆದರೆ ಅರಸೀಕೆರೆಯಲ್ಲಿ ಪತ್ರಿಕಾ ಭವನ ಆಗಿರಲಿಲ್ಲ. ಆದರೆ ಒಂದು ವರ್ಷದ ನಂತರ ಈಗ ಮಂಜೂರಾಗಿದ್ದು, ಇಂದು ಮುಖ್ಯ ಮಂತ್ರಿಯವರು ಶಂಕು ಸ್ಥಾಪನೆ ಮಾಡಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ 1988 ರಲ್ಲಿ ಸ್ಥಾಪನೆಯಾಗಿದೆ. ಪತ್ರಕರ್ತರಿಂದ ನಿರಂತರ ಚಟುವಟಿಕೆ ಆಗುತ್ತಿದೆ. ತುಂಬಾ ಅನೇಕ ಸಮಯಗಳಲ್ಲಿ ಹೋರಾಟ ಮಾಡಿದ್ದೇವೆ. ಪತ್ರಕರ್ತರ ಕ್ಷೇಮಾಭಿವೃದ್ಧಿ ದೃಷ್ಟಿಯಲ್ಲಿ ಮೊದಲ ಆದ್ಯತೆ ನೀಡಲಾಗಿದೆ. ಅಪತ್ಬಾಂಧವ ಮೂಲಕ ಪ್ರತಿ ತಿಂಗಳು ರೂ.50,000 ಜೋಡಣೆ ಆಗುತ್ತಿದೆ.
ಕ್ಷೇಮಾಭಿವೃದ್ಧಿ ನಿಧಿ ನಾವು ಬಂದಾಗ ಶೂನ್ಯ ಇತ್ತು ಈಗ ಒಂದು ಕೋಟಿ ಹಣ ಕ್ರೀಡೀಕರಣ ಆಗಿದೆ. ಇದರಿಂದ ಪತ್ರಕರ್ತರ ಅನಾರೋಗ್ಯದ ಸಮಸ್ಯೆಯಲ್ಲಿ ಬಳಕೆ ಮಾಡಲಾಗುತ್ತದೆ.
ಪ್ರತಿಭಾ ಪುರಸ್ಕಾರವನ್ನು ಶರಣ್ಯ ನಾಯಕ್, ನವ ಎಸ್. ನಾಯಕ್, ರಘು ಸಮರ್ಥ ನಾಡಿಗ್, ಸಮರ್ಥ ಎಸ್. ಕಿರುವಾಸೆ, ವೈ.ಎಸ್. ಅನಿಕೇತನ್, ವೈ.ಎಸ್.ಆಯುಷ್, ಕೆ.ಎನ್.ಶ್ರೇಯಾ ಇವರಿಗೆ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ವಿ.ಶಿವಕುಮಾರ್, ಬಿ.ವೈ.ರಾಘವೇಂದ್ರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ರಾಷ್ಟ್ರೀಯ ಮಂಡಳಿ ಸದಸ್ಯ ಭಂಡಿಗಡಿ ನಂಜುಂಡಪ್ಪ ಉಪಸ್ಥಿತರಿದ್ದರು.