ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ವಿನೋಬನಗರದ ಸರ್ಕಾರಿ ಪ್ರೌಢಶಾಲೆ ಯಲ್ಲಿ ಇಂಟ್ರಾಕ್ಟ್ ಕ್ಲಬ್ ಇನ್ಸ್ಟಾಲೇಷನ್ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ರೊಟೇರಿಯನ್ ಬಸವರಾಜ್ ಬಿ ಕಾರ್ಯದರ್ಶಿ ಜಯಶೀಲ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಜೋನ್ 11ರ ವಲಯ ಸೇನಾನಿ ಕಿರಣ್ ಕುಮಾರ್ ಜಿ, ಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ್ ಹಾಗೂ ಸಹ ಶಿಕ್ಷಕಿ ಶೋಭ ರಾಣಿ ಹಿರೇಮಠ್ ಆನ್ಸ್ ಅಧ್ಯಕ್ಷರಾದ ರಾಜಶ್ರೀ ಬಸವರಾಜ್, ಕಾರ್ಯದರ್ಶಿ ಮಥುರಾ ಧನಂಜಯ್ ಇದ್ದರು. ಇಂಟ್ರಾಕ್ಟ್ ಕ್ಲಬ್ಬಿನ ಅಧ್ಯಕ್ಷರಾಗಿ ವಿದ್ಯಾರ್ಥಿ ಶ್ರೇಯಸ್. ಮತ್ತು ಕಾರ್ಯದರ್ಶಿಯಾಗಿ ಜಯಶ್ರೀ ಪದವಿ ಸ್ವೀಕಾರ ಮಾಡಿದರು.

ರೋಟರಿ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಮಾತನಾಡಿ ಇಂಟ್ರಾಕ್ಟ್ ಕ್ಲಬ್ ತಮ್ಮ ವಿದ್ಯಾರ್ಥಿ ನಾಯಕರನ್ನು ತಯಾರು ಮಾಡುವಲ್ಲಿ ಸಫಲವಾಗಿದೆ. ನಮ್ಮ ರೋಟರಿ ಸಂಸ್ಥೆ ಸದಾ ನಿಮ್ಮೊಂದಿಗೆ ಇದೆ, ಮುಂದಿನ ದಿನಗಳಲ್ಲಿ ನಿಮ್ಮ ಕುಂದು ಕೊರತೆಗಳನ್ನು ಪರಿಹರಿಸುವುದರಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂದರು.


ವಲಯ ಸೇನಾನಿ ಕಿರಣ್ ಕುಮಾರ್ ಜಿ ಮಾತನಾಡಿ ಇಂಟ್ರಾಕ್ಟ್ ಕ್ಲಬ್ ಅಮೆರಿಕದಲ್ಲಿ 1962ರಲ್ಲಿ ಪ್ರಾರಂಭವಾಗಿ ಇಂದಿಗೂ ಉತ್ತಮ ವಿದ್ಯಾರ್ಥಿಗಳನ್ನು ಮತ್ತು ವಿದ್ಯಾರ್ಥಿ ನಾಯಕರನ್ನು ಸಮಾಜಕ್ಕೆ ನೀಡಿದೆ ಎಂದು ತಿಳಿಸಿದರು.

ಸಂದರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ ಸದಸ್ಯರಾದ ರೊಟೇರಿಯನ್ ಆನಂದ್ ಎ ಎಸ್, ರೊಟೇರಿಯನ್ ಈಶ್ವರ್ ಬಿವಿ, ರೊಟೇರಿಯನ್ ಧರ್ಮೇಂದ್ರ ಸಿಂಗ್, ರೊಟೇರಿಯನ್ ಶುಭ ಚಿದಾನಂದಯ್ಯ ಇದ್ದರು. ಇಂಟ್ರಾಕ್ಟ್ ಕ್ಲಬ್ಬಿನ ಚೇರ್ಮನಾದ ರೊಟೇರಿಯನ್ ಗೀತಾ ಜಗದೀಶ್ ಕಾರ್ಯಕ್ರಮ ನಿರೂಪಣೆ ಮಾಡಿದರು.ಕಾರ್ಯಕ್ರಮದ ಕಾರ್ಯದರ್ಶಿ ಜಯಶೀಲ ಶೆಟ್ಟಿ ವಂದನಾರ್ಪಣೆ ಮಾಡಿದರು.