ಶ್ರೀಮತಿ ಆರ್. ರಾಜೇಶ್ವರಿ ಕೋಂ ಲೇಟ್ ಟಿ.ಎಸ್. ಶಿವಕುಮಾರ್, ಶ್ರೀ ದುರ್ಗಮ್ಮ ದೇವಸ್ಥಾನ, ಕಾಮಾಕ್ಷಿ ಬೀದಿ, ಶಿವಮೊಗ್ಗ ಇವರು ಐಸಿಐಸಿಐ ಪ್ರಡೆನ್ಷಿಯಲ್ ಲೈಫ್ ಇನ್ಷೂರನ್ಸ್- ಬೆಂಗಳೂರು, ಐಸಿಐಸಿಐ ಪ್ರಡೆನ್ಷಿಯಲ್ ಲೈಫ್ ಇನ್ಷೂರನ್ಸ್- ಮುಂಬೈ, ಇಂಡಸಿಂಡ್ ಬ್ಯಾಂಕ್ ಲಿ., ಶಿವಮೊಗ್ಗ ಮತ್ತು ಇಂಡಸಿಂಡ್ ಬ್ಯಾಂಕ್ ಲಿ., ಬೆಂಗಳೂರು ಇವರುಗಳ ವಿರುದ್ದ ವಿಮಾ ಸೌಲಭ್ಯ ನೀಡುವಲ್ಲಿನ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರಾದ ಶ್ರೀಮತಿ ಆರ್. ರಾಜೇಶ್ವರಿಯವರ ಪತಿ ಖರೀದಿಸಿದ್ದ ಅಶೋಕ ಲೈಲ್ಯಾಂಡ್ ಬೋರ್‌ವೆಲ್ ಲಾರಿಯ ಮೇಲೆ ಐಸಿಐಸಿಐ ಪ್ರಡೆನ್ಷಿಯಲ್ ಲೈಫ್ ಇನ್ಷೂರನ್ಸ್ ರವರಿಂದ ರೂ. 1,04,878/- ವಿಮಾ ಫ್ರಿಮಿಯಂ ಪಡೆದಿದ್ದು, 2024ರಲ್ಲಿ ಪಾಲಿಸಿದಾರರು ತೀರಿಕೊಂಡಿದ್ದರು. ಈ ಕುರಿತು ಇನ್ಷೂರನ್ಸ್ ಕಂಪನಿಗೆ ತಿಳಿಸಿ, ವಿಮಾ ಭರವಸೆಯ ಮೊತ್ತದಲ್ಲಿ ಸಾಲದ ಮೊತ್ತವನ್ನು ಭರಿಸಲು ಕೋರಿರುತ್ತಾರೆ. 1 ಮತ್ತು 2ನೇ ಎದುರುದಾರರಿಂದ ವಿಮಾ ಪಾಲಿಸಿಯ ಪ್ರೀಮಿಯಂ ಹಣವನ್ನು 3ನೇ ಎದುರುದಾರರಿಂದ 2023ರಂದು ಪಡೆದಿದ್ದು, ದೂರುದಾರರ ಪತಿ ಮರಣ ಹೊಂದಿದ ನಂತರ ದೂರುದಾರರ ಪತಿಯ ಸಾಲದ ಖಾತೆಗೆ ಜಮಾ ಮಾಡಿರುವುದರಿಂದ ಎಲ್ಲಾ ಎದುರುದಾರರು ಸೇವಾ ನ್ಯೂನ್ಯತೆಯನ್ನುಂಟು ಮಾಡಿರುತ್ತಾರೆ ಎಂದು ದೂರು ಸಲ್ಲಿರುತ್ತಾರೆ.
ದೂರನ್ನು ದಾಖಲಿಸಿಕೊಂಡ ಆಯೋಗವು ನೀಡಿದ ನೋಟಿಸ್‌ಗೆ ಎದುರುದಾರರು ವಕೀಲರ ಮೂಲಕ ಹಾಜರಾಗಿ ದೂರುದಾರರು ಪಾಲಿಸಿಯನ್ನು ಪಡೆಯುವ ಪೂರ್ವದಲ್ಲಿ ಟಿ.ಎಂ.ಟಿ. ವೈದ್ಯಕೀಯ ತಪಾಸಣೆಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿರುವುದಿಲ್ಲ ಹಾಗೂ ನಿಧನ ಹೊಂದಿದ ದಿನದಂದು ಪಾಲಿಸಿಯು ಚಾಲ್ತಿಯಲ್ಲಿರಲಿಲ್ಲ ಎಂಬ ಕಾರಣದೊಂದಿಗೆ ಪಾಲಿಸಿಯ ಭರವಸೆ ಮೊತ್ತ ಪಾವತಿಸಲು ಸಾಧ್ಯವಿಲ್ಲವೆಂದು ತಕರಾರು ಸಲ್ಲಿಸಿರುತ್ತಾರೆ.