ಶಿವಮೊಗ್ಗದಲ್ಲಿ ಯುದ್ಧ ಟ್ಯಾಂಕರ್ ಗಳು ಬಂದು ಪ್ರತಿಷ್ಠಾಪನೆಗೊಂಡಿದೆ. ನಗರದ ಎಂಆರ್ ಎಸ್ ನ ವೃತ್ತದಲ್ಲಿಯೇ ಟ್ಯಾಂಕರ್ ಸ್ಥಾಪನೆಗೊಳ್ಳಬೇಕು ಎಂಬ ಬಯಕೆಯಿಂದ ತರಿಸಲಾಗಿದ್ದ ಯುದ್ಧ ಟ್ಯಾಂಕರ್ ನಂತರ ಸ್ಥಾಪಿತಗೊಂಡಿದ್ದು ಫ್ರೀಡಂ ಪಾರ್ಕ್ ನಲ್ಲಿ.
ಈಗ ಯುದ್ಧ ವಿಮಾನ ಬರ್ತಾಯಿದೆ. ಇದೂ ಸಹ ಫ್ರೀಡಂ ಪಾರ್ಕ್ ನಲ್ಲಿ ಜಾಗ ನೋಡಲಾಗಿದ್ದು ಈಗ ವಾಯುಪಡೆ ನಿವೃತ್ತಿಗೊಂಡ ಯುದ್ಧ ವಿಮಾನ ಫೈಟರ್ ಜೆಟ್ ಬರಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಈ ಯುದ್ಧ ವಿಮಾನ, ಯುದ್ಧ ಟ್ಯಾಂಕರ್ ಗಳು ಯುವಕರಿಗೆ ಸ್ಪೂರ್ತಿ ಯಾಗಲಿದೆ ಎಂಬ ವಿಶ್ವಾಸದಲ್ಲಿ ನಗರಕ್ಕೆ ತರಿಸಲಾಗುತ್ತದೆ ಎಂದು ಶಿವಮೊಗ್ಗದ ಜನಪ್ರತಿನಿಧಿಗಳು ಹೇಳಿದ್ದನ್ನ ಮಾಧ್ಯಮವೊಂದು ಉಲ್ಲೇಖಿಸಿ ಸುದ್ದಿ ಮಾಡಿದೆ. ಯುದ್ಧ ಟ್ಯಾಂಕರ್ ನೋಡಿ ಎಷ್ಟು ಜನ ಸ್ಪೂರ್ತಿಗೊಂಡು ಸೇನೆಗೆ ಸೇರಿದ್ದಾರೆ ಗೊತ್ತಿಲ್ಲ. ಇನ್ನು ಈ ಯುದ್ಧ ವಿಮಾನ ನೋಡಿ ಎಷ್ಟುಜನ ಸ್ಪೂರ್ತಿ ಆಗಲಿದ್ದಾರೆ ಕಾದು ನೋಡಬೇಕಿದೆ.