ಕರ್ನಾಟಕ ರಾಜ್ಯ ಔಷಧ ತಯಾರಕರ ಸಂಘದ ಗೌರವ ಕಾರ್ಯದರ್ಶಿಯಾಗಿ ತೀರ್ಥಹಳ್ಳಿ ಬಾಳಗಾರ ಶ್ರೀಧರ ಶೆಟ್ಟಿ ಆಯ್ಕೆಯಾಗಿದ್ದಾರೆ.ಕರ್ನಾಟಕ ರಾಜ್ಯ ಔಷಧ ತಯಾರಕರ ಸಂಘದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ತೀರ್ಥಹಳ್ಳಿ ಮೂಲದ ಯಶಸ್ವಿ ಉದ್ಯಮಿಗಳು, ನೀಮಸ್ ಫಾರ್ಮಾಸ್ಯುಟಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕರೂ ಆದ ಶ್ರೀಧರ ಶೆಟ್ಟಿ ಅವರನ್ನು ಅಯ್ಕೆ ಮಾಡಲಾಗಿದೆ.

ಶ್ರೀಧರ್ ಶೆಟ್ಟಿN.K.D.P.M.A ಯ ಗೌರವ ಕಾರ್ಯದರ್ಶಿಯಾಗಿ ಈಗಾಗಲೇ ಸೇವೆ ಸಲ್ಲಿಸಿದ್ದು ಈಗ ಔಷಧ ಉದ್ಯಮದ ಅತ್ಯಂತ ಗೌರವಾನ್ವಿತ ಸ್ಥಾನಕ್ಕೆ ಆಯ್ಕೆಗೊಂಡಿರುವುದು ಅವರ ನಾಯಕತ್ವಕ್ಕೆ ಸಾಕ್ಷಿಯಾಗಿದೆ.

K.D.P.M.A ಗೌರವ ಕಾರ್ಯದರ್ಶಿಗಳಾಗಿ ಆಯ್ಕೆ ಆಗಿರುವ ಶ್ರೀಧರ ಶೆಟ್ಟಿ ಅವರ ಆತ್ಮೀಯರು, ಹಿತೈಷಿಗಳಾದ ತೀರ್ಥಹಳ್ಳಿ ಬಂಟರ ಸಂಘದ ಗೌರವ ಅಧ್ಯಕ್ಷರಾದ ಅಡ್ಡಮನೆ ಪ್ರಭಾಕರ್ ಶೆಟ್ಟಿ ಅಧ್ಯಕ್ಷರಾದ BL ಪ್ರಭಾಕರ್ ಹೆಗ್ಡೆ ಉಪಾಧ್ಯಕ್ಷ DS ವಿಶ್ವನಾಥ ಶೆಟ್ಟಿ ಕಾರ್ಯದರ್ಶಿ BR ರಾಘವೇಂದ್ರ ಶೆಟ್ಟಿ ಸಹಕಾರ್ಯದರ್ಶಿ ಕುಡುಮಲ್ಲಿಗೆ ಭಾಸ್ಕರ ಶೆಟ್ಟಿ ಬೆಟ್ಟಮಕ್ಕಿ ಅಶೋಕ ಶೆಟ್ಟಿ ಬಂಟರ ಮಹಿಳಾ ವಿಭಾಗದ ಪದಾಧಿಕಾರಿಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ.