ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳನ್ನೊಳಗೊಂಡ ತಂಡವು ರೂಟ್ ಮಾರ್ಚ್ ಅನ್ನು ಹಮ್ಮಿಕೊಂಡಿದ್ದು, ಸದರಿ ರೂಟ್ ಮಾರ್ಚ್ ಅನ್ನು ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಪ್ಪುನಗರದಿಂದ ಪ್ರಾರಂಭಿಸಿ, ವಿನಾಯಕ ವೃತ್ತ, ಟಿಪ್ಪು ನಗರ ಚಾನೆಲ್‌ ನಿಂದ ಕೆಳಗಿನ ತುಂಗಾನಗರಕ್ಕೆ ಬಂದು ಮುಕ್ತಾಯ ಮಾಡಲಾಯಿತು.

ಸದರಿ ರೂಟ್ ಮಾರ್ಚ್ ನ ನೇತೃತ್ವವನ್ನು ಶ್ರೀ ಸಿದ್ದಪ್ಪ ಪಿಎಸ್‌ಐ ತುಂಗಾನಗರ ಪೊಲೀಸ್‌ ಠಾಣೆ ರವರು ವಹಿಸಿದ್ದು, ಇದರೊಂದಿಗೆ ವಿಶೇಷ ಕಾರ್ಯಪಡೆ ಹಾಗೂ ಶಿವಮೊಗ್ಗ ನಗರದ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.