ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ 2023ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್ ಸಿ ಯೋಗೇಶ್ ರವರ ನೇತೃತ್ವದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮಾನ್ಯ ಆಯುಕ್ತರಾದ ಮಾಯಣ್ಣಗೌಡ ರವರನ್ನು ಭೇಟಿ ಮಾಡಿ ಶಿವಮೊಗ್ಗ ದಸರಾ ಕಾರ್ಯಕ್ರಮದ ವಿಚಾರವಾಗಿ ಮನವಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿ ವರ್ಷವೂ ಸಹ ಶಿವಮೊಗ್ಗ ನಗರದಲ್ಲಿ ದಸರಾ ಹಬ್ಬದ ಪ್ರಯುಕ್ತ ನವರಾತ್ರಿಯ ಪ್ರತಿದಿನವೂ ಮಹಾನಗರ ಪಾಲಿಕೆ ವತಿಯಿಂದ ಅದ್ದೂರಿ ಕಾರ್ಯಕ್ರಮಗಳನ್ನು ಆಚರಿಸುತ್ತಾ ಬಂದಿರುತ್ತೇವೆ.ಅದರಂತೆ ಈ ಬಾರಿಯೂ ಸಹ ಅಕ್ಟೋಬರ್ 2ನೇ ತಾರೀಕಿನಂದು ದಸರಾ ಹಬ್ಬವಿದ್ದು ಕೇವಲ ಒಂದುವರೆ ತಿಂಗಳ ಕಾಲಾವಕಾಶ ಮಾತ್ರ ಉಳಿದಿರುವುದರಿಂದ, ಹತ್ತು ದಿನಗಳ ಕಾಲ ನೆರವೇರಬೇಕಾಗಿರುವ ದಸರಾ ಕಾರ್ಯಕ್ರಮಕ್ಕೆ ಪೂರ್ವಸಿದ್ಧತೆಯನ್ನು ಕೈಗೊಳ್ಳಬೇಕಾಗಿದೆ.ಇದಕ್ಕೆ ಅವಶ್ಯಕತೆಯಂತೆ ದಸರಾ ಕಾರ್ಯಕ್ರಮಕ್ಕೆ ಅಗತ್ಯವಿರುವ ಹಣದ ವ್ಯವಸ್ಥೆಗೆ, ಜಂಬೂಸವಾರಿಗೆ ಅಗತ್ಯವಿರುವ ಆನೆಗಳ ವ್ಯವಸ್ಥೆಗೆ, ಎಲ್ಲಾ ಸ್ಥಳೀಯ ಕಲಾವಿದರನ್ನು ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಚಾರವಾಗಿ ಚರ್ಚಿಸುವಂತೆ ಹಾಗೂ ದಸರಾ ಕಾರ್ಯಕ್ರಮಕ್ಕೆ ಅಗತ್ಯವಿರುವ ಹಣದ ವ್ಯವಸ್ಥೆಗೆ ಸರ್ಕಾರಕ್ಕೆ ಪತ್ರ ಬರೆದ ನಂತರ ಮಾನ್ಯ ಉಸ್ತುವಾರಿ ಸಚಿವರುಗಳೊಂದಿಗೆ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲೂ ಸಹ ಶಿವಮೊಗ್ಗ ದಸರಾ ಹಬ್ಬದ ಕುರಿತು ಮಾತನಾಡುತ್ತೇವೆ ಕಳೆದ ಬಾರಿ ಕರ್ನಾಟಕ ಸರ್ಕಾರದಿಂದ 50 ಲಕ್ಷ ರೂ ಹಣಗಳನ್ನು ನೀಡಿದ್ದರು.
ಒಟ್ಟಾರೆ ಕಳೆದ ವರ್ಷ ಎರಡು ಕೋಟಿ 34 ಲಕ್ಷ ರೂಗಳ ವೆಚ್ಚದಲ್ಲಿ ಅದ್ದೂರಿ ದಸರಾ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟಿದ್ದರು ಹಾಗೂ ಈ ಬಾರಿಯ ದಸರಾ ಹಬ್ಬಕ್ಕೆ ಸಂಬಂಧಿಸಿದಂತೆ ರೂಪರೇಷೆಗಳನ್ನು ಸಿದ್ಧಪಡಿಸಿ ಹಾಗೂ ದಸರಾ ಹಬ್ಬಕ್ಕೆ ಮಹಾನಗರ ಪಾಲಿಕೆ ವತಿಯಿಂದಲೇ ಅತಿ ಹೆಚ್ಚಿನ ಹಣ ಖರ್ಚಾಗುವುದರಿಂದ ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕೂಡಲೇ ಪ್ರಾರಂಭಿಸಿ ಹಾಗೂ ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅನೇಕ ಹೊಸ ಹೊಸ ಅಧಿಕಾರಿಗಳು ಇರುವುದರಿಂದ ತತ್ತಕ್ಷಣವೇ ದಸರಾ ಹಬ್ಬಕ್ಕೆ ಸಂಬಂಧಿಸಿದಂತೆ ಸಕಲ ಸಿದ್ಧತೆಗಳನ್ನು ಪ್ರಾರಂಭಿಸುವಂತೆ ಮೊನ್ನೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮಹಾನಗರ ಪಾಲಿಕೆ ಮಹಾಪೌರರಾದ ನಾಗರಾಜ್ ಕನಕಾರಿ ರವರು, ಮಾಜಿ ಮಹಾ ನಗರ ಪಾಲಿಕೆ ಉಪ ಮಹಾಪೌರರಾದ ಹೆಚ್ ಪಾಲಾಕ್ಷಿ ರವರು, ಮಾಜಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ರಮೇಶ್ ಹೆಗಡೆ ರವರು, ಯಮನ ರಂಗೇಗೌಡರವರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿರವರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ ರಂಗನಾಥ್ ರವರು, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಚಿನ್ನಪ್ಪ ರವರು, ರಂಗೇಗೌಡ ರವರು, ನಾಗರಾಜುರವರು ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.