2025-26 ನೇ ಸಾಲಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆಗಳಾದ ಅಡಿಕೆ, ಮಾವು, ಕಾಳುಮೆಣಸು, ಮತ್ತು ಶುಂಠಿ ಬೆಳೆಗಳಿಗೆ ಬೆಳೆವಿಮೆ ಯೋಜನೆಯಡಿ ವಿಮೆಯನ್ನು ಪಾವತಿಮಾಡಲು ಆಗಸ್ಟ್ 14 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

ಈ ಬೆಳೆಗಳನ್ನು ಬೆಳೆದಿರುವ ರೈತರುಗಳು ಬೆಳೆವಿಮೆಯ ಪ್ರಯೋಜನವನ್ನು ಪಡೆಯಲು ಪ್ರತಿ ಎಕರೆಗೆ ಆಯಾ ಬೆಳೆಗಳಿಗೆ ನಿಗದಿ ಮಾಡಿರುವ ಹಣ ಪಾವತಿ ಮಾಡಿ ಇದರ ಸದುಪಯೋಗ ಪಡೆಯಬಹುದಾಗಿದ್ದು, ಅಡಿಕೆಗೆ ರೂ.2560/-, ಮಾವು ರೂ.3200/-, ಕಾಳುಮೆಣಸು ರೂ.1692/-, ಶುಂಠಿ ರೂ.2600/-, ರೈತರುಗಳು ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ. ಸೆಂಟರ್) ಗ್ರಾಮ ಒನ್, ಮತ್ತು ಬ್ಯಾಂಕ್‌ಗಳಲ್ಲಿ ವಿಮೆ ಕಂತನ್ನು ಪಾವತಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬAಧಿಸಿದ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಅಥವಾ ತೋಟಗಾರಿಕೆ ಇಲಾಖೆ ಶಿಕಾರಿಪುರ ಕಛೇರಿ ಹಾಗೂ ದೂ.ಸಂ.08187-223544 ಸಂಪರ್ಕಿಸಬೇಕೆAದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಜಿಲ್ಲಾ ಪಂಚಾಯತ್ ಶಿಕಾರಿಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.