ಇತ್ತೀಚಿನ ಯುಗದಲ್ಲಿ ನೂತನ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಲ್ಲೂ ಹಬ್ಬಿದ್ದು, ಕೃಷಿ ಕ್ಷೇತ್ರಕ್ಕೂ ಕಾಲಿಟ್ಟಿರುವುದು ಸಂತಸದ ಸಂಗತಿ. ಇದರಿಂದ ರೈತಾಪಿ ವರ್ಗದವರಿಗೆ ಅನುಕೂಲವಾಗಲಿದೆ ಎಂದು ಕೃಪಿ ಇಲಾಖೆ ಉಪನಿರ್ದೇಶಕಿ ಮಂಜುಳಾ.ಜಿ ಹೇಳಿದರು.
ಕೃಷಿ ವಿಜ್ಞಾನ ಕೇಂದ್ರ, ಇಫ್ಕೋ ಸಂಸ್ಥೆ ಹಾಗೂ ಕೋರಮಂಡಲ ಸಂಸ್ಥೆ ಇವರ ಸಹಯೋಗದೊಂದಿಗೆ ಆ.01 ರಂದು ಹಾರನಹಳ್ಳಿ ಹೋಬಳಿಯ ರಾಮನಗರ ಗ್ರಾಮದಲ್ಲಿ ಹಾಗೂ ಆ.2 ರಂದು ಕೆಳದಿ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಆಯೋಜಿಸಿದ್ದ ತರಬೇತಿ ಹಾಗೂ ಪದ್ದತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.
ಇತ್ತೀಜಿನ ದಿನಗಳಲ್ಲಿ ಡ್ರೋನ್ ಹಾಗೂ ನ್ಯಾನೋ ರಸಗೊಬ್ಬರಗಳ ಬಳಕೆ ರೈತರಿಗೆ ಆಶಾಕಿರಣವಾಗಿದೆ. ಕೃಷಿ ಇಲಾಖೆ ಆತ್ಮ ಯೋಜನೆಯಡಿ ರೈತರಿಗೆ ಕ್ಷೇತ್ರಮಟ್ಟದಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ತರಬೇತಿ, ಕಿಸಾನ್ ಗೋಷ್ಠಿಗಳು ಹಾಗೂ ಪದ್ದತಿ ಪ್ರಾತ್ಯಕ್ಷಿಕೆಗಳ ಮುಖಾಂತರ ರೈತರಿಗೆ ಅರಿವು ಮೂಡಿಸಲಾಗುತ್ತಿದೆ.
ರೈತರಿಗೆ ಹರಳು ರೂಪದ ಯೂರಿಯಾ ಮತ್ತು ಡಿ.ಎ.ಪಿ ರಸಗೊಬ್ಬರವನ್ನು ಕೊಡುವ ಬದಲಾಗಿ ನ್ಯಾನೋ ಯೂರಿಯಾ (ಶೇ.20 ಸಾರಜನಕ)-500 ಮಿಲಿ ಬಾಟಲಿನಲ್ಲಿ ಲಭ್ಯವಿದ್ದು (ರೂ.225 ದರ) ಮತ್ತು ನ್ಯಾನೋ ಡಿ.ಎ.ಪಿ (ಶೇ.8 ಸಾರಜನಕ ಮತ್ತು ಶೇ.16 ರಂಜಕ)-500 ಮಿಲಿ ಬಾಟಲಿನಲ್ಲಿ ಲಭ್ಯವಿರುವ (ದರ ರೂ.600) ದ್ರವ ರೂಪದ ರಸಗೊಬ್ಬರಗಳನ್ನು ಶೀಫಾರಿತ ಪ್ರಮಾಣದಲ್ಲಿ ಬೆಳೆಗಳಿಗೆ ಸಿಂಪರಣೆ ಮಾಡಬೇಕು ಎಂದು ಮಾಹಿತಿ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ರಮೇಶ್ ಎಸ್.ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅತಿಯಾದ ಯೂರಿಯಾ ಗೊಬ್ಬರ ಬಳಕೆಯಿಂದ ಮನುಷ್ಯ ಹಾಗೂ ಮಣ್ಣಿನ ಆರೋಗ್ಯದ ಮೇಲೆ ವಿಪರೀತ ದುಷ್ಪರಿಣಾಮಗಳನ್ನು ಬೀರುತ್ತಿವೆ. ಅತಿಯಾಗಿ ಬಳಕೆಯಾಗುವ ಸಾರಜನಕವು ಅಂರ್ತಜಲವನ್ನು ಸೇರಿ ನೀರನ್ನು ನೈಟ್ರೇಟ್ ಅಂಶಗಳಿAದ ನೀರನ್ನು ಕಲುಷಿತಗೊಳಿಸುತ್ತಿದೆ. ಹಾಗೂ ಉತ್ಪಾದಿಸುವ ಆಹಾರ ದಾನ್ಯಗಳಲ್ಲೂ ಸಹ ರಾಸಾಯನಿಕ ಶೇಷಾಂಶಗಳು ಸೇರಿ ಕ್ಯಾನ್ಸ್ರ್ ಮತ್ತು ಹೃದಯ ಸಂಬAಧಿತ ಕಾಯಿಲೆಗಳನ್ನು ಸೃಷ್ಠಿಸುತ್ತಿವೆ. ಅದೇ ರೀತಿ ಮಣ್ಣು ಸಹ ತನ್ನ ಸತ್ವವನ್ನು ಕಳೆದುಕೊಂಡು ಬಂಜೆಯಾಗುತ್ತಿದೆ. ಆದ್ದರಿಂದ ರೈತರುಗಳು ಯೂರಿಯಾ ರಸಗೊಬ್ಬರದ ಬದಲಾಗಿ ನ್ಯಾನೋ ಯೂರಿಯಾ ರಸಗೊಬ್ಬರ ಬಳಸುವಮತೆ ಮನವಿ ಮಾಡಿಕೊಂಡರು.
ಇಫ್ಕೋ ಸಂಸ್ಥೆ ಹಾಗೂ ಕೋರಮಂಡಲ ಸಂಸ್ಥೆಯ ಪ್ರತಿನಿದಿಗಳು ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ. ಬಳಕೆ ಕುರಿತು ಮಾತನಾಡಿ, ಈ ದ್ರವ ರೂಪದ ರಸಗೊಬ್ಬರವನ್ನು ಬೆಳೆಗಳು 25- 30 ದಿನಗಳಿದ್ದಾಗ (ಮೊದಲನೇ ಹಂತ) ಮತ್ತು 50-55 ದಿನಗಳಲ್ಲಿ (ಎರಡನೇ ಹಂತ) ಸಿಂಪಡಿಸುವುದರಿAದ ಪೋಷಕಾಂಶಗಳ ಸದ್ಬಳಕೆಯಾಗಿ ಉತ್ತಮ ಬೆಳೆ ಬೆಳವಣಿಗೆ ಮತ್ತು ಇಳುವರಿ ಸಾಧ್ಯವಾಗುತ್ತದೆ. ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ ಅಧಿಕ ಹರಡುವಿಕೆ ಸಾಮರ್ಥ್ಯ ಹೊಂದಿರುವುದರಿAದ ಇವುಗಳನ್ನು ಇತರೆ ಕೀಟನಾಶಕ, ಶಿಲಿಂಧ್ರನಾಶಕಗಳೊAದಿಗೆ (ತ್ರಾಮ ಅಂಶವಿರುವ ಶಿಲೀಂದ್ರನಾಶಕ ಹೊರತು ಪಡಿಸಿ) ಸೇರಿಸಿ ಸಿಂಪರಣೆ ಮಾಡಬಹುದಾಗಿದೆ.
ಇದರಿಂದಾಗಿ ಮೇಲು ಗೊಬ್ಬರವಾಗಿ ಬಳಸುವ ಯೂರಿಯಾ ಚೀಲವನ್ನು ಶೇ.50 ರಷ್ಟು ಕಡಿಮೆ ಮಾಡಬಹುದಾಗಿದೆ. ಹಾಗೂ ಡ್ರೋನ್ ಮುಖಾಂತರ 5 ನಿಮಿಷದಲ್ಲಿ 1 ಎಕರೆ ಸಿಂಪರಣೆ ಮಾಡುವುದರಿಂದ ಕಡಿಮೆ ಸಮಯದಲ್ಲಿ ಸಿಂಪಡಿಸುವುದಲ್ಲದೆ ಕೂಲಿ ಆಳುಗಳ ಸಮಸ್ಯೆಯನ್ನು ಸಹ ಪರಿಹರಿಸಬಹುದು ಎಂಬುದಾಗಿ ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ರಮೇಶ್, ಕೃಷಿ ಅಧಿಕಾರಿ ಪ್ರತಿಮಾ, ಸುನೀಲ್, ವಿವಿ ವಿಜ್ಞಾನಿಗಳು, ಕೃಷಿಕ ಸಮಾಜದ ನಿರ್ದೇಶಕರು ಮತ್ತು ರೈತರು ಹಾಜರಿದ್ದರು.
(ಫೋಟೊ ಇದೆ)