ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ, ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ ಅವರೊಂದಿಗೆ “ಶಿವಮೊಗ್ಗ ದಸರಾ – 2025” ಕುರಿತು ಸಭೆ ನಡೆಸಿದರು.ದಸರಾ ಉತ್ಸವವನ್ನು ಯಶಸ್ವಿಯಾಗಿ, ಸಾಂಸ್ಕೃತಿಕ ವೈಭವದಿಂದ ಹಾಗೂ ಸಾರ್ವಜನಿಕರ ಹೆಚ್ಚಿನ ಭಾಗವಹಿಸಿಕೊಡುವ ರೀತಿಯಲ್ಲಿ ಆಯೋಜಿಸುವ ಕುರಿತು ಅನೇಕ ವಿಷಯಗಳನ್ನು ಚರ್ಚಿಸಿದರು.
- ಹತ್ತು ದಿನಗಳ ಕಾಲ ನಡೆಯಲಿರುವ ಶಿವಮೊಗ್ಗ ದಸರಾ ಉತ್ಸವಕ್ಕಾಗಿ ಸಮಗ್ರ ಸಿದ್ಧತೆಗಳನ್ನು ತಕ್ಷಣದಿಂದ ಆರಂಭಿಸಲು ಸೂಚಿಸಿದರು.
- ಉತ್ಸವದ ಸುಗಮ ನಿರ್ವಹಣೆಗೆ ತಾತ್ಕಾಲಿಕ ಸಮಿತಿ ರಚಿಸುವ ನಿರ್ಧಾರ ಕೈಗೊಂಡರು.
- ಉತ್ಸವದ ವಿವಿಧ ತಯಾರಿಗಳನ್ನು ನೋಡಿಕೊಳ್ಳಲು ಒಟ್ಟು 14 ಸಮಿತಿಗಳನ್ನು ರಚಿಸಲು ನಿರ್ದೇಶನ ನೀಡಿದರು.
- ಅಂಬಾರಿ ಉತ್ಸವ ಕಾರ್ಯಕ್ರಮಕ್ಕಾಗಿ ಅಗತ್ಯ ತಯಾರಿಗಳನ್ನು ಸಮಯಕ್ಕೆ ಮುನ್ನ ಪೂರ್ಣಗೊಳಿಸಲು ಸೂಚಿಸಿದರು.
- ಜಂಬೂಸವಾರಿ ಕಾರ್ಯಕ್ರಮಕ್ಕೆ ಆನೆಗಳ ಅನುಮತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
- ಉತ್ಸವಕ್ಕೆ ಅಗತ್ಯ ಅನುದಾನವನ್ನು ರಾಜ್ಯ ಸರ್ಕಾರದಿಂದ ತರುವ ಕುರಿತು ಸಮಾಲೋಚನೆ ನಡೆಸಿದರು.
- ಸಾರ್ವಜನಿಕರ ಹೆಚ್ಚಿನ ಪಾಲ್ಗೊಳ್ಳುವಿಕೆ, ಪ್ರವಾಸಿಗರ ಆಕರ್ಷಣೆ, ಸಾಂಸ್ಕೃತಿಕ ಕಾರ್ಯಕ್ರಮಗಳ ವೈವಿಧ್ಯತೆ ಮತ್ತು ಭದ್ರತಾ ಕ್ರಮಗಳಿಗೆ ವಿಶೇಷ ಗಮನ ಹರಿಸುವಂತೆ ತಿಳಿಸಿದರು.
- ಉತ್ಸವದ ಹತ್ತು ದಿನಗಳ ಅವಧಿಯಲ್ಲಿ ಸಾಂಸ್ಕೃತಿಕ, ಧಾರ್ಮಿಕ, ಕಲಾ ಮತ್ತು ಕ್ರೀಡಾ ಕಾರ್ಯಕ್ರಮಗಳ ಸಮನ್ವಯದೊಂದಿಗೆ, ಎಲ್ಲ ವರ್ಗದ ಜನರಿಗೆ ಆಕರ್ಷಕ ಅನುಭವ ಒದಗಿಸಲು ತೀರ್ಮಾನಿಸಲಾಯಿತು.
- ಕಾರ್ಯಕ್ರಮಗಳು ನಡೆಯುವ ಸ್ಥಳಗಳಾದ ಅಂಬೇಡ್ಕರ್ ಭವನ, ಕುವೆಂಪು ರಂಗಮಂದಿರ ಹಾಗೂ ಹಳೆ ಜೈಲು ಆವರಣವನ್ನು ಮುಂಚಿತವಾಗಿ ಕಾಯ್ದಿರಿಸಿ, ದಸರಾ ಉತ್ಸವಕ್ಕೆ ಸಂಪೂರ್ಣವಾಗಿ ಮೀಸಲಿಡುವಂತೆ ಸೂಚಿಸಿದರು.