ಬೈಕ್ ಟ್ಯಾಕ್ಸಿಸೇವೆಯಲ್ಲಿದ್ದ 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಅಪಾಯದಲ್ಲಿ: ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು – ಡಿ.ಎಸ್.ಅರುಣ್ ಒತ್ತಾಯ

ಇಂದು 156ನೇ ವಿಧಾನಮಂಡಲ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ. ಎಸ್. ಅರುಣ್ ರವರು ರಾಜ್ಯದಲ್ಲಿ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತಿರುವ ಬೈಕ್ ಟ್ಯಾಕ್ಸಿ ಸೇವೆಗಳು, ಸರ್ಕಾರದ ಅಸಮರ್ಪಕ ಪರಿಸ್ಥಿತಿ ನಿರ್ವಹಣೆ ಕಾರಣದಿಂದ ಗಂಭೀರ ಸಂಕಷ್ಟವನ್ನು ಎದರಿಸುತ್ತಿದರೆ ಎಂದು ತಿಳಿಸಿ, ರಾಪಿಡೋ ಸೇರಿದಂತೆ ಹಲವು ಸಂಸ್ಥೆಗಳು ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರೂ, ಸರ್ಕಾರದ ನಿರ್ಲಕ್ಷ್ಯದಿಂದ ಈ ಕ್ಷೇತ್ರದ ಭವಿಷ್ಯ ಪ್ರಶ್ನಾರ್ಹವಾಗಿದೆ ಎಂದು ಸದನಕ್ಕೆ ಮಾನ್ಯ ಶಾಸಕರು ತಿಳಿಸಿದರು.

ಕೊನೆಯ ಮೈಲಿ ಸಂಪರ್ಕಕ್ಕಾಗಿ (Last Mile Connectivity) ಬೈಕ್ ಟ್ಯಾಕ್ಸಿಗಳು ಸಾರ್ವಜನಿಕರಿಗೆ ಅತಿ ವೇಗವಾದ, ಕಡಿಮೆ ವೆಚ್ಚದ ಮತ್ತು ಸುಲಭ ಸಂಚಾರವನ್ನು ಒದಗಿಸುತ್ತಿವೆ. ಇವು ಸರ್ಕಾರಕ್ಕೆ ಕೋಟ್ಯಾಂತರ ರೂ.ಗಳ ಜಿಎಸ್‌ಟಿ ಆದಾಯವನ್ನೂ ತಂದುಕೊಡುತ್ತಿವೆ. ಆದರೂ, ಈ ಕ್ಷೇತ್ರದ ಬೆಳವಣಿಗೆಗೆ ಬೆಂಬಲ ನೀಡುವ ಬದಲು, ಸರ್ಕಾರದ ಅಸಮರ್ಪಕ ಸಮಸ್ಯೆ ನಿರ್ವಹಣೆಯಿಂದ ಹಾಗೂ ಅನುಚಿತ ನಿಯಮಗಳು ಉದ್ಯೋಗ ಕಳೆವ ಪರಿಸ್ಥಿತಿಯನ್ನು ಉಂಟುಮಾಡುತ್ತಿವೆ.

ಈ ಕ್ಷೇತ್ರಕ್ಕೆ ತಕ್ಷಣವೇ ನಿಯಮ ಬದಲಾವಣೆ ಹಾಗೂ ತಿದ್ದುಪಡಿ ಅಗತ್ಯವಿದೆ. ಇಲ್ಲವಾದರೆ ರಾಜ್ಯದ 5 ಲಕ್ಷಕ್ಕೂ ಹೆಚ್ಚು ಜನರ ಜೀವನೋಪಾಯ ಹಾಳಾಗುವ ಭೀತಿ ಇದೆ. ಬೆಂಗಳೂರು ಮಾತ್ರವಲ್ಲದೆ ಶಿವಮೊಗ್ಗ ಸೇರಿದಂತೆ ರಾಜ್ಯದ ಇತರ ನಗರಗಳಲ್ಲೂ ಈ ಸೇವೆಗಳು ಸಾರ್ವಜನಿಕರಿಗೆ ದೊಡ್ಡ ಅನುಕೂಲವನ್ನು ನೀಡುತ್ತಿವೆ. ಸರ್ಕಾರದ ತ್ವರಿತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯದ ಕೊರತೆಯಿಂದ ಇಂದು ಉದ್ಯೋಗ ಕಳೆವ ಕಾರಣವಾಗಿದೆ ಎಂದು ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಅವರು ಆರೋಪಿಸಿದರು.

ಭಾರತದ ಅನೇಕ ಪ್ರಮುಖ ನಗರಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಆದರೆ, ಕರ್ನಾಟಕದಲ್ಲಿ ಇದರ ಬಗ್ಗೆ ಇರುವ ಗೊಂದಲ ಮುಂದುವರೆದಿದೆ. ಕಂಪನಿಗಳ ಮಾಲೀಕರೊಂದಿಗೆ ನೇರ ಚರ್ಚೆ ನಡೆಸಿ, ಎಲ್ಲರಿಗೂ ಅನುಕೂಲವಾಗುವ ಪರಿಸ್ಥಿತಿಯನ್ನು ನಿರ್ಮಿಸುವ ಬದಲು, ಸರ್ಕಾರ ಸಮಯ ವ್ಯರ್ಥ ಮಾಡುತ್ತಲೇ ಬಂದಿದೆ ಎಂದು ಮಾನ್ಯ ಶಾಸಕರು ಆರೋಪಿಸಿದರು.

ಕನಿಷ್ಠ ವೇತನ ಪಡೆಯುವ ಸಾವಿರಾರು ನೌಕರರು ದಿನನಿತ್ಯದ ಸಂಚಾರಕ್ಕೆ ಕಾರ್‌ಪೂಲಿಂಗ್ ಹಾಗೂ ಅಗ್ಗದ ಬೈಕ್ ಟ್ಯಾಕ್ಸಿಗಳ ಮೇಲೆ ಅವಲಂಬಿತರಾಗಿದ್ದಾರೆ. ಸ್ಪಷ್ಟ ಮಾರ್ಗಸೂಚಿಗಳನ್ನು ನೀಡುವ ಬದಲು ಹಿಂದಿನಿಂದಲೂ ಸರ್ಕಾರದ ನಿರ್ಧಾರಗಳಲ್ಲಿ ಇರುವ ವಿಳಂಬ, ಸಾಮಾನ್ಯ ಜನರ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂದು ಶಾಸಕರು ಎಚ್ಚರಿಸಿದರು.

ಜನರ ಉದ್ಯೋಗ ಮತ್ತು ಜೀವನೋಪಾಯವನ್ನು ಕಾಪಾಡುವುದು ಸರ್ಕಾರದ ಹೊಣೆಗಾರಿಕೆ ಎಂದು ಡಿ.ಎಸ್ ಅರುಣ್ ರವರು ಸಚಿವರ ಬಳಿ ವಿಷಯ ಪ್ರಸ್ತಾಪಿಸಿದರು.

ಡಿ.ಎಸ್. ಅರುಣ್
ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳು…