ಕೇಳಿರಿ ಎಲ್ಲರೂ ಹೇಳುವೆ ನಿಮಗೆ ಒಂದು ಕಥೆಯನ್ನು, ನಮ್ಮ ಸ್ವಾತಂತ್ರದ ಗೆಲುವಿನ ಸಾರವನ್ನು,
ಕೇಸರಿ ಬಿಳಿ ಹಸಿರು ನಮ್ಮ ಬಾವುಟ,
ಬಾನಿನಲ್ಲಿ ಅದರ ಹಾರಾಟ, ಎಲ್ಲಾ ಸೇರಿ ಹಾಕಿ ಹಂದರ, ಆಹಾ ನಮ್ಮ ಭಾರತ ನೋಡಲೆಷ್ಟು ಸುಂದರ,
ಇತ್ತ ಅಹಿಂಸಾ ಮಾರ್ಗದಲ್ಲಿ ಗಾಂಧೀಜಿ,
ಅತ್ತ ಕ್ರಾಂತಿ ಮಾರ್ಗದಲ್ಲಿ ನೇತಾಜಿ,
ನಡೆಸಿದರು ಕದನ,
ಹಾಗಾಗಿ ಮುಟ್ಟಿತು ನಮ್ಮ ಬಾವುಟ ಗಗನ,
ಯುವ ಜನತೆಯ ಶಕ್ತಿ,
ಎಲ್ಲರೂ ಮೆಚ್ಚುವ ಯುಕ್ತಿ, ದೇಶಾಭಿಮಾನ ತುಂಬಿರುವ ಜನಸಾಗರ,
ಸೈನ್ಯಪಡೆ ಯಲ್ಲಿ ಸಾಧನೆ ಅಪಾರ,
ನಾವೆಲ್ಲಾ ಎತ್ತಿಹಿಡಿಯಬೇಕು ದೇಶದ ಕೀರ್ತಿ,
ಸ್ವಾತಂತ್ರ್ಯ ಹೋರಾಟಗಾರರೇ ನಮಗೆ ಸ್ಫೂರ್ತಿ,
ಇವತ್ತಿಗೆ ಸ್ವಾತಂತ್ರ್ಯ ಸಿಕ್ಕಿ75 ವರುಷ,
ನಮಗದೇ ಹರುಷ,
ಪ್ರಶಸ್ತಿಗಳ ಮಾಲೆಯ ಭಾರತಮಾತೆಯ ಮುಡಿಗೇರಿಸಿ, ಆಕೆಯ ತ್ಯಾಗ ಎಲ್ಲೆಲ್ಲೂ ಹರಿಸಿ, ಒಟ್ಟಾಗಿ ಹೇಳಲು ವಂದೇಮಾತರಂ,
ಲೋಕವೆಸ್ಟು ಸುಂದರಂ,
ಜಾತಿ ಮತದ ಭೇದವಿಲ್ಲ, ಖುಷಿಗೆ ಏನು ಕಮ್ಮಿ ಇಲ್ಲ, ಎಲ್ಲರ ಹೃದಯದಲ್ಲಿ ದೇಶಾಭಿಮಾನ ತುಂಬಿದೆ, ಸ್ವಾತಂತ್ರೋತ್ಸವ ಹೊಸ ಸೊಗಸು ತಂದಿದೆ,
ಚಾಕ್ಲೆಟ್ ನೋಡುತ್ತಿದೆ ನಮ್ಮ ಕಡೆ,
ಬಾವುಟದ ರಂಗು ಎಲ್ಲಾ ಕಡೆ, ಒಟ್ಟಾಗಿ ರೂಪಿಸಿದರು ಸ್ವಾತಂತ್ರ ದಿನ,
ಅದೇ ಈ ಸುದಿನ.
ನಿಧಿ. ಸಿ
9ನೆ ತರಗತಿ ,ಜ್ಯೋತಿನಗರ
ಶಿವಮೊಗ್ಗ

CCTV SALES & SREVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153