ವಿಜ್ಞಾನ ನಿಂತ ನೀರಲ್ಲ. ಸದಾ ಚಲನೆಯಲ್ಲಿರುವ ಅನ್ವೇಷಣೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ನಮ್ಮ ಮನೆ-ಮನಗಳಿಗೆ ವಿಜ್ಞಾನವೇ ಬರುತ್ತಿದ್ದು ಅದನ್ನು ಬಳಸಿಕೊಳ್ಳುವ ಮನಸ್ಥಿತಿ ನಮ್ಮದಾಗಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಅಧ್ಯಕ್ಷರು ಹಾಗೂ ಕೆಎಸ್‌ಟಿಎ ಸದಸ್ಯರಾದ ಡಾ.ಹುಲಿಕಲ್ ನಟರಾಜ್ ನುಡಿದರು.


ವಿಜ್ಞಾನ ತಂತ್ರಜ್ಞಾನ ಸಂಶೋಧನೆ ಮತ್ತು ಕಲಾ ಪ್ರಗತಿ ಸಂಸ್ಥೆ ಹಾಗು ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ವತಿಯಿಂದ ಕೆಳದಿ ಶಿವಪ್ಪನಾಯಕ ಕೃಷಿ ತೋಟಗಾರಿಗೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಇವರ ಸಹಯೋಗದಲ್ಲಿ ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿರುವ ಐದು ದಿನಗಳ ವಿಜ್ಞಾನ ಮತ್ತು ತಂತ್ರಜ್ಞಾನಗಳ ವಸ್ತು ಪ್ರದರ್ಶನ – ಅನ್ವೇಷಣೋತ್ಸವ2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಭಯ, ಆತಂಕ, ದುಗುಡ, ದುರಾಸೆಯಿಂದ ವಿಜ್ಞಾನ ದೂರವಾಗುತ್ತದೆ. ಆದರೆ ನಾವು ಇವನ್ನೆಲ್ಲ ಮೀರಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಅಭಿವೃದ್ದಿಯೆಡೆ ಹೆಜ್ಜೆ ಹಾಕಬೇಕು. ವಿಜ್ಞಾನಕ್ಕೆ ಸಂಬAಧಿಸಿದAತೆ ಸದಾ ಕುತೂಹಲಿಗಳಾಗಿದ್ದು ಪ್ರತಿ ವಿಷಯಗಳ ಬಗ್ಗೆ ಮಾಹಿತಿ ಪಡೆದು, ವಿಚಾರಿಸಿ ಅದರಲ್ಲಿ ತೊಡಗಿಕೊಳ್ಳಬೇಕೆಂದರು.
ಅನ್ವೇಷಣೋತ್ಸವದಲ್ಲಿ ದೇಶದ ಪ್ರತಿಷ್ಟಿತ 8 ಸಂಸ್ಥೆಗಳು ಪಾಲ್ಗೊಂಡಿದ್ದು ವಿದ್ಯಾರ್ಥಿಗಳಲ್ಲಿನ ಚೈತನ್ಯವನ್ನು ಪುಟಿದೇಳಿಸುವ ಉದ್ದೇಶ ಹೊಂದಿವೆ. ಡಿಆರ್‌ಡಿಒ, ಇಸ್ರೋ, ಪ್ಲಾಸ್ಮಾ ಸಂಶೋಧನಾ ಸಂಸ್ಥೆಗಳಿಗೆ ಸಾಮಾನ್ಯರಿಗೆ ಪ್ರವೇಶ ಕಷ್ಟವಾಗಿದೆ. ಆದರೆ ಈ ಸಂಸ್ಥೆಗಳು ಈಗ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಈ ಪ್ರದರ್ಶನದ ಸದುಪಯೋಗ ಪಡೆಯಬೇಕು. ಪ್ರತಿ ವಿದ್ಯಾರ್ಥಿಗಳು ವಿಜ್ಞಾನಿಗಳಾಗಬೇಕು. ಹೊಸ ಅನ್ವೇಷಣೆಗಳನ್ನು ಮಾಡಬೇಕು. 24/7 ಅನ್ವೇಷಣೆಯಲ್ಲಿ ತೊಡಗಿದಾಗ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.


ಡಿಸಿಎಫ್ ಡಾ.ಅಜ್ಜಯ್ಯ ಜಿ.ಆರ್ ಮಾತನಾಡಿ, ಅನ್ವೇಷಣೆಗಳನ್ನು ಸಂಭ್ರಮಿಸುತ್ತಾ ಯುವನತೆಯಲ್ಲಿ ಹೊಸ ಹೊಸ ವೈಜ್ಞಾನಿಕ ಅನ್ವೇಷಣೆಗಳ ಬಗ್ಗೆ ಪ್ರೇರೇಪಣೆ, ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುತ್ತಿರುವ ಇಂತಹ ಕಾರ್ಯಕ್ರಮ ಶ್ಲಾಘನೀಯ. 2047 ರ ಹೊತ್ತಿಗೆ ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶ ಆಗಬೇಕಾದರೆ ಈ ರೀತಿಯ ಕಾರ್ಯಕ್ರಮಗಳು ಬಹು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಎಸ್‌ಎಎಸ್‌ಟಿಆರ್‌ಎ ಅಧ್ಯಕ್ಷ ಡಾ.ಓಂಕಾರ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ತಲುಪಿಸುವ ಉದ್ದೇಶದಿಂದ ಹಾಗೂ ಯುವ ಮನಸ್ಸಿನಲ್ಲಿ ವಿಜ್ಞಾನ-ತಂತ್ರಜ್ಞಾನ ಕುತೂಹಲ ಮೂಡಿಸುವುದು, ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸಾಧಿಸಿರುವ ತಾಂತ್ರಿಕ ಶಕ್ತಿ ಮತ್ತು ಸ್ವಾವಲಂಬನೆ ಪರಿಚಯಿಸುವುದು ಹಾಗೂ ವಿಜ್ಞಾನ ಮತ್ತು ಇಂಜಿನಿಯರಿAಗ್ ವೃತ್ತಿಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು, ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶದ ಬಗ್ಗೆ ಕುತೂಹಲ ಬೆಳೆಸುವುದು, ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಿದ ಹೆಜ್ಜೆಗುರುತುಗಳನ್ನು ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.


ಈ ಕಾರ್ಯಕ್ರಮದಲ್ಲಿ ಇಸ್ರೋದ ಉಪಗ್ರಹಗಳ ಮಾದರಿ, ಬಾಹ್ಯಾಕಾಶ ನೌಕೆಗಳ ಚಿತ್ರ-ಮಾದರಿಗಳು, ಬಾಹ್ಯಾಕಾಶ ಸಂಶೋಧನೆಗೆ ಸಂಬAಧಿಸಿದ ಪೋಸ್ಟರ್ ಹಾಗೂ ಮಾಹಿತಿ ಫಲಕಗಳು, ಆಡಿಯೋ-ವಿಜುವಲ್ ಪ್ರದರ್ಶನ ಸೇರಿದಂತೆ 18 ಮಾದರಿಗಳ ಪ್ರದರ್ಶನವಿದೆ.
ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಸಂಗ್ರಹಾಲಯ (Visvesvaraya Industrial & Technological Museum – VITM) ನಡೆಸುವ “ಸೈನ್ಸ್ ಆನ್ ವೀಲ್ಸ್” ಮೊಬೈಲ್ ಪ್ರದರ್ಶನವಿದ್ದು, ಗ್ರಾಮಾಂತರ ಹಾಗೂ ಅರೆ-ನಗರ ಪ್ರದೇಶಗಳ ಜನತೆಗೆ ವಿಜ್ಞಾನದ ಕೌತುಕವನ್ನು ತಲುಪಿಸುವ ವಿಶಿಷ್ಟ ಯೋಜನೆಯಾಗಿದೆ.

ಈ ಬಸ್‌ನಲ್ಲಿ 24 ವೈಜ್ಞಾನಿಕ ಪ್ರದರ್ಶನ ವಸ್ತುಗಳು ಅಳವಡಿಸಲ್ಪಟ್ಟಿದ್ದು, ಜನರು ತಮ್ಮ ಊರುಗಳಲ್ಲಿಯೇ ವಿಜ್ಞಾನದ ಅನುಭವ ಪಡೆಯಬಹುದು. ಹಾಗೂ ಈ ಬಸ್‌ನಲ್ಲಿ ತಾವೇ ಸ್ವತಃ ತಾವೇ ಪ್ರಯೋಗ ಮಾಡಬಹುದು.
ಡಿಆರ್‌ಡಿಓ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರ, ರಕ್ಷಣಾ ತಂತ್ರಜ್ಞಾನ, ರೋಬೋಟಿಕ್ಸ್, ರಾಡಾರ್, ಡ್ರೋನ್‌ಗಳು ಇತ್ಯಾದಿಗಳ ಪ್ರದರ್ಶನವಿದ್ದು, ವಿದ್ಯಾರ್ಥಿ ಕಾರ್ಯಾಗಾರಗಳು – ವಿಜ್ಞಾನ-ತಂತ್ರಜ್ಞಾನದಲ್ಲಿ ವೃತ್ತಿ ರೂಪಿಸಲು ಪ್ರೇರಣೆ ನೀಡಲಾಗುವುದು. ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲಾಗುವುದು.


ಗುಜರಾತ್‌ನ ಗಾಂಧಿನಗರದಲ್ಲಿರುವ ಪ್ಲಾಸ್ಮಾ ಸಂಶೋಧನಾ ಸಂಸ್ಥೆಯು ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಸಂಶೋಧನಾ ಸಂಸ್ಥೆಯಾಗಿದ್ದು, ಪ್ಲಾಸ್ಮಾ ಮತ್ತು ಫ್ಯೂಷನ್ ವಿಜ್ಞಾನದಲ್ಲಿ ದೇಶದ ಮುಂಚೂಣಿಯ ಸಂಸ್ಥೆಯಾಗಿದೆ. ಪ್ಲಾಸ್ಮಾ ಸಂಸ್ಥೆಯು ಪ್ಲಾಸ್ಮಾದ ಜೀವಂತ ಪ್ರದರ್ಶನಗಳು – ವಿವಿಧ ಬಗೆಯ ಪ್ಲಾಸ್ಮಾ ಮತ್ತು ಅವುಗಳ ಪ್ರಾಯೋಗಿಕ ಉಪಯೋಗಗಳು, ತ್ಯಾಜ್ಯ ನಿರ್ವಹಣೆ, ವಸ್ತ್ರೋದ್ಯಮ, ವೈದ್ಯಕೀಯ ಕ್ಷೇತ್ರ, ಫ್ಯೂಷನ್ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನಗಳು, ಟೋಕಮಾಕ್ ಮಾದರಿ ಮತ್ತು ಅದರ ಪ್ಲಾಸ್ಮಾ ಬಂಧನ ಕಾಯಿಲ್‌ಗಳು, ಐಟರ್ ಯೋಜನೆಯ ಸ್ಕೇಲ್ ಮಾದರಿ, ಕ್ರಯೊ-ಪಂಪ್ ಹಾಗೂ ಅದರ ಉಪಯೋಗಗಳ ಕುರಿತು 60 ಕ್ಕೂ ಹೆಚ್ಚು ಮಾದರಿಗಳನ್ನು ಪ್ರದರ್ಶಿಸಿದ್ದು ವಿದ್ಯಾರ್ಥಿಗಳು ಈ ಪ್ರದರ್ಶನದ ಸದುಪಯೋಗ ಪಡೆಯುವಂತೆ ಕೋರಿದರು.


ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲುದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಡಾ.ಕೆ.ಪಿ.ಬಸವರಾಜ್, ಡಾ.ಕುಮಾರಸ್ವಾಮಿ, ದೇವಿಕುಮಾರ್, ಶಶಾಂಕ್, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಇತರೆ ಅಧಿಕಾರಿಗಳು, 8 ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು. ವಿವಿ ಡೀನ್ ಡಾ.ತಿಪ್ಪೇಶ ಸ್ವಾಗತಿಸಿದರು.


ಕೌತುಕ ಮೂಡಿಸಿದ ಪ್ರದರ್ಶನ…

ಪ್ರದರ್ಶನದ ಆರಂಭದಲ್ಲಿ ವಿಐಟಿಎಂ ನವರ “ಸೈನ್ಸ್ ಆನ್ ವೀಲ್ಸ್” ಎಲ್ಲರ ಗಮನ ಸೆಳೆದು, ಸಾರ್ವಜನಿಕರು, ವಿದ್ಯಾರ್ಥಿಗಳು ಮೊಬೈಲ್ ವಾಹನದೊಳಗೆ ಫಲಕಗಳನ್ನು ಓದಿಕೊಂಡು ಸ್ವತಃ ತಾವೇ ಉತ್ಸಾಹದಿಂದ ಪ್ರಯೋಗ ಮಾಡುತ್ತಿದ್ದರು.
ಇಸ್ರೋದ ಉಪಗ್ರಹಗಳ ಮಾದರಿ, ಬಾಹ್ಯಾಕಾಶ ನೌಕೆಗಳ ಚಿತ್ರ-ಮಾದರಿಗಳು, ಬಾಹ್ಯಾಕಾಶ ಸಂಶೋಧನೆಗಳ ವಿವರಗಳು, ಪ್ಲಾಸ್ಮಾ ಮತ್ತು ಫ್ಯೂಷನ್ ವಿಜ್ಞಾನ ಹಾಗೂ ಪ್ಲಾಸ್ಮಾದ ಜೀವಂತ ಪ್ರದರ್ಶನಗಳು ಮಾಹಿತಿಪೂರ್ಣವಾಗಿದ್ದು ಆಸಕ್ತಿದಾಯಕವಾಗಿವೆ. ಆರ್ಯಭಟ ಪ್ಲಾನೆಟೊರಿಯಂ ನಲ್ಲಿ ಡೋಮ್ ವಿಜುಯಲ್ಸ್ ಮೂಲಕ ಕಾಸ್ಮಿಕ್ ಜಗತ್ತಿನ ಪರಿಚಯ ಮಾಡಿಸುವುದು ವಿಸ್ಮಯಾತ್ಮಕ ಅನುಭವ ನೀಡುತ್ತದೆ.