ತೀರ್ಥಹಳ್ಳಿ:- ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಲಿವತಿಯಿಂದ ಅಮೃತ್ -2 ಯೋಜನೆಯ 2 ಕೋಟಿ 69 ಲಕ್ಷ ವಿವಿಧ ಕಾಮಗಾರಿಯ ಶಂಕುಸ್ಥಾಪನೆ ನೆರೆವೆರಿಸಿ ಮಾತನಾಡಿ
ಪಟ್ಟಣ ಪಂಚಾಯತಿಯನ್ನು ಪುರಸಭೆ ಮಾಡುವ ಪ್ರಯತ್ನ ನಡೆಯುತ್ತಿದೆ , ಪುರಸಭೆಯಾದರೆ ಸರ್ಕಾರದ ಅನುದಾನವು ಹೆಚ್ಚಾಗಿ ಬರುತ್ತದೆ . ನಮ್ಮ ಪಟ್ಟಣ್ಣದಲ್ಲಿ 14 ಸಾವಿರಕ್ಕಿಂತ ಹೆಚ್ಚಿಗೆ ಜನಸಂಖ್ಯೆಯಾಗುತ್ತಿಲ್ಲ ಅದರಿಂದ ಪಟ್ಟಣ ಪಂಚಾಯತಿ ಪುರಸಭೆಯಾಗಲು ಪಟ್ಟಣದ ಯಡೆಹಳ್ಳಿಕೆರೆ, ಇಂದಾವರ , ತುಡ್ಕಿ, ಬದನೆಹಿತ್ಲು, ಚಿಟ್ಟೆಬೈಲು, ಕುರುವಳ್ಳಿ, ಇಂದಿರಾನಗರವನ್ನು ಪಟ್ಟಣಕ್ಕೆ ಸೇರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.


ಕೋಳಿಕಾಲು ಗುಡ್ಡು, ಶಂಕರಗುಡ್ಡ, ಕುರುವಳ್ಳಿ ಮುಂತಾದದ ಪ್ರದೇಶವನ್ನು ನನ್ನ ಅವಧಿಯಲ್ಲಿ ಕೊಳಜೆ ನೈರ್ಮಲ್ಯಗೆ ಸೇರಿಸಿದ್ದರಿಂದ ಇಂದು ಅನುಧಾನ ಬರುತ್ತಿದೆ , ಪಟ್ಟಣ ಪಂಚಾಯತಿಗೆ ನನ್ನ ಪ್ರಾದೇಶಿಕ ಅಭಿವೃದ್ಧಿಯಲ್ಲಿ ಹಣ ಮಂಜೂರಾತಿಯಾದರೆ ಹೆಚ್ಚಿನ ಹಣ‌ನೀಡುತ್ತೇನೆ ಎಂದರು.

ಮಲೆನಾಡು ಪ್ರಾಧಿಕಾರದ ಅಧ್ಯಕ್ಷರಾದ ಆರ್‌.ಎಂ. ಮಂಜುನಾಥಗೌಡ ಮಾತನಾಡಿ ಸರ್ಕಾರದಿಂದ ಕಡಿಮೆ ಹಣ ಪಟ್ಟಣ ಪಂಚಾಯತಿಗೆ ಬಂದರು , ಆ ಹಣ ಬಳಸಿ ಸುಂದರ ಪಟ್ಟಣವನ್ನಾಗಿ ಮಾಡಿದ್ದಾರೆ, ಪಟ್ಟಣದ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಮಾಡುವ ಪ್ರಯತ್ನ ಪಟ್ಟಣ ಪಂಚಾಯತಿಯಿಂದ ಆಗಬೇಕು, ಹಾಗೆಯೇ ಸರ್ಕಾರದಿಂದ ಬಂದ ಈ ಹಣದಲ್ಲಿ ಗುಣಮಟ್ಟದ ಕೆಲಸ ಆಗುವ ಹಾಗೆ ಗುತ್ತಿಗೆದಾರರ ಮೇಲೆ ನಿಗಾ ಇಡಬೇಕೆಂದರು.

ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಅಸಾದಿ ಮಾತನಾಡಿ ಪಟ್ಟಣದ ನೀರು ಸರಬರಾಜು ಘಟಕಕ್ಕೆ ಒಳಚರಂಡಿ ಮಂಡಳಿಯಿಂದ 2ಕೋಟಿ 69 ಲಕ್ಷ ಹಣ ಬಂದಿದೆ. ಈ ಹಣದಲ್ಲಿ 975 ಅಡಿ ರಸ್ತೆ , 1300 ಅಡಿ ಕಾಂಪೌಂಡ್ ಮಾಡಲಿದ್ದೇವೆ, ಕೇಂದ್ರ ಸರ್ಕಾರ 50% ರಾಜ್ಯ ಸರ್ಕಾರ 40% ಹಾಗೂ‌ ಪಟ್ಟಣ ಪಂಚಾಯತಿ 10% ಬರಿಸಲಿದೆ ಎಂದರು.
ಈ ಹಿಂದೆ ನಮ್ಮ ಶಿವಮೊಗ್ಗದ ಜಿಲ್ಲಾಧಿಕಾರಿಯಾದ ಸ್ವೆಲ್ವಮಣೆಯವರು ಇಂದು ಎಸ್.ಬಿ.ಎಂ. ನ ಎಂ.ಡಿ ಯಾಗಿದ್ದಾರೆ , ಪಟ್ಟಣ ಪಂಚಾಯತಿ ಸಂಬಂಧಿಸಿದಂತೆ 5 ಕೋಟಿಯ ಕಿಯಯೋಜನೆ ಮಾಡಿ ತನ್ನಿ ಮಂಜೂರಾತಿ ಮಾಡುತ್ತೇನೆ ಎಂದಿದ್ದರು, ಹಾಗಯೇ 5 ಕೋಟಿಯ ಕ್ರಿಯಾ ಯೋಜನೆ ಸಹ ತಯಾರಾಗಿದ್ದು ಸದ್ಯದಲ್ಲೆ ಮಂಜೂರಾತಿಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲಾ ಪಕ್ಷದ ನಾಯಕರೂ‌ ಬೆಂಬಲ ನೀಡಿದ್ದಾರೆ , ಹಾಗೇಯೇ ಪಟ್ಟಣ ಪಂಚಾಯತಿ ಎಲ್ಲಾ ಸದಸ್ಯರುಗಳ ಬೆಂಬಲದಿಂದ ಇಂದು ಪಟ್ಟಣ ಪಂಚಾಯಿತಿ ಸುಂದರವಾಗಿ ನಿರ್ಮಾಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಗೀತಾ ರಮೇಶ್ , ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ , ರಾಘವೇಂದ್ರ ಶೆಟ್ಟಿ , ನಮ್ರತ್, ಶಬ್ನಂ, ಮಂಜುಳಾ ನಾಗೇಂದ್ರ, ಮುಖ್ಯಾಧಿಕಾರಿ ನಾಗರಾಜ್ , ಎಇಇ ರವಿಕುಮಾರ್ ಮುಂತಾದದವರಿದ್ದರು.