ಗೌರಿ ಗಣೇಶ ಹಬ್ಬ ಹಾಗೂ ಈದ್‌ ಮಿಲಾದ್‌ ಹಬ್ಬಗಳ ಸಂಬಂಧ, ಕಾನೂನು ಸುವ್ಯವಸ್ಥೆ ಹಿತ ದೃಷ್ಟಿ ಯಿಂದ 27ರಂದು ಶ್ರೀ ಎ. ಜಿ. ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು 1, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಎಸ್ ರಮೇಶ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು 2, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ಸೇರಿದಂತೆ SAF ಮತ್ತು RAF ನ ತುಕಡಿಗಳನ್ನು ಒಳಗೊಂಡು ಶಿವಮೊಗ್ಗ ನಗರದ ರಾಗಿಗುಡ್ಡ ಮತ್ತು ಸೂಳೆಬೈಲಿನಲ್ಲಿ ಪೊಲೀಸ್‌ ಪಥ ಸಂಚಲನ (ರೂಟ್‌ ಮಾರ್ಚ್‌) ವನ್ನು ನಡೆಸಲಾಗಿರುತ್ತದೆ.

ಸದರಿ ರೂಟ್ ಮಾರ್ಚ್ ನಲ್ಲಿ ಶಿವಮೊಗ್ಗ ನಗರದ ಪೊಲೀಸ್‌ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರು, ಪೊಲೀಸ್‌ ಉಪ ನಿರೀಕ್ಷಕರು, ಪೊಲೀಸ್ ಅಧಿಕಾರಿ - ಸಿಬ್ಬಂದಿಗಳು ಮತ್ತು SAF ಮತ್ತು RAF ನ ಪೋಲಿಸ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.