ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಡೇ-ನಲ್ಮ್ ನಲ್ಲಿ ಎಂಪಾನೇಲ್ಡ್ ಸ್ವ-ಸ್ವಹಾಯ ಗುಂಪುಗಳ ಮೂಲಕ ಸ್ವಚ್ಛ ಭಾರತ್ 2.0 ಯೋಜನೆಯಡಿ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು 7 ಸಮುದಾಯ ಸಂಚಾಲಕರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.


ಆಸಕ್ತರು ಸೆ.2 ರ ಸಂಜೆ 5 ಗಂಟೆಯೊಳಗೆ ಮಹಾನಗರಪಾಲಿಕೆ ಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕು ಅಥವಾ ಅಧಿಕೃತವಾಗಿ healthcitycorporation@gmail.com
ಗೆ ಕಳುಹಿಸಬಹುದು. ಅರ್ಜಿಯನ್ನು ಸಲ್ಲಿಸುವಾಗ ಮತದಾರರ ಗುರುತಿನ ಕಾರ್ಡ್, ಆಧಾರ್ ಕಾರ್ಡ್, ಎಂಪಾನೇಲ್ಡ್ ದಾಖಲೆಗಳು, ಶೈಕ್ಷಣಿಕ ಅರ್ಹತೆ(ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ), ಡೆ-ನಲ್ಮ್ ಅನುಮೋದನೆ ಪಡೆದ ನಮೂನೆ ಸಲ್ಲಿಸಬೇಕು. ಸೇವಾ ಕಾಮಗಾರಿ ದಸ್ತಾವೇಜಿನ TorRಮತ್ತು SLA
https://shivamoggacity.mrc.gov.in
ವೆಬ್‌ಸೈಟ್ ನಲ್ಲಿ ಲಭ್ಯವಿದೆ.


ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಆಯೋಜಿಸಿ ವಿಷಯದ ತಿಳುವಳಿಕೆ ಸಾಮರ್ಥ್ಯದ ಆಧಾರದ ಮೇರೆಗೆ ಆಯ್ಕೆ ಮಾಡಲಾಗುವುದು ಹಾಗೂ ಸಂದರ್ಶನದ ದಿನಾಂಕವನ್ನು ಪತ್ರದ ಮೂಲಕ ತಿಳಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ:8618215311 ಗೆ ಸಂಪರ್ಕಿಸಬಹುದೆಂದು ಪಾಲಿಕೆ ಕಾರ್ಯಪಾಲಕ ಅಭಿಯಂತರು ತಿಳಿಸಿದ್ದಾರೆ.