ಶಿವಮೊಗ್ಗ ನಗರದಲ್ಲಿ ಗಣಪತಿ ವಿಸರ್ಜನೆ ವೇಳೆ ವಿಶೇಷವಾಗಿ ಹಿಂದೂ ಮುಸ್ಲೀಂ ಸೌಹಾರ್ದ ಮೆರೆದಿದ್ದಾರೆ.ಈ ಹಿಂದೆಯೂ ಹಲವು ಗಣಪತಿ ವಿಸರ್ಜನೆ ವೇಳೆ ಹೂವಿನ ಹಾರ ಹಾಕಿ ಸೌಹಾರ್ಧ ಮೆರೆಯಲಾಗಿತ್ತು.
ದ್ರೌಪತಮ್ಮ ಸರ್ಕಲ್ ನಿಂದ ಸಾಗಿದ ಮೆರವಣಿಗೆಯಲ್ಲಿ ಜೆಪಿ ನಗರದ ಆಜಂ ಮಸೀದಿ ಕಮಿಟಿಯವರಾದ ಸ್ಯೆಫುಲ್ಲಾ . ಹಾಗು ದರ್ಗಾ ಕಮಿಟಿಯ ಸತ್ತಾರ್ ಸಾಬ್ ಇತರೆ ಮುಸ್ಲಿಂ ಮುಖಂಡರು ಗಣಪತಿಗೆ ಹೂವಿನ ಹಾರಹಾಕಿ ಭಾವ್ಯೆಕ್ಯತೆ ಮೆರೆದಿದ್ದಾರೆ.
ತುಂಗಾನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ 60 ಕ್ಕೂ ಹೆಚ್ಚು ಗಣಪನ ವಿಸರ್ಜನಾ ಮೆರವಣಿಗೆ ಇಂದು ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಿಸಿದ್ದಾರೆ.ಗೋಪಾಳದ ದ್ರ್ವಾಪದಮ್ಮ ಕನ್ನಡ ಯುವಕರ ಸಂಘದವರ ಗಣಪತಿ ವಿಸರ್ಜನಾ ಮೆರವಣಿಗೆ ನಡೆದಿದೆ.
ಸಂದರ್ಭದಲ್ಲಿ ಗಣಪತಿ ಪ್ರತಿಷ್ಟಾನದ ಅಧ್ಯಕ್ಷರಾದ ರಾಮು ಮುಖಂಡರಾದ ವೆಂಕಟೇಶ್ ವಸಂತ್ ಭಾಸ್ಕರ್ ಮತ್ತು ತುಂಗಾನಗರದ ಪೋಲಿಸ್ ಇನ್ಸ್ಪೆಕ್ಟರ್ ಕೆ.ಟಿ.ಗುರುರಾಜ ಮತ್ತು ಸಿಬ್ಬಂದಿಯವರು ಉಪಸ್ಥಿರಿದ್ದರು.