ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕ ದೇವಸ್ಥಾನ ಸೇವಾ ಸಮಿತಿ ಅಂಬೇಡ್ಕರ್ ನಗರ ಟಿಪ್ಪು ನಗರ 7 ನೇ ತಿರುವುನಲ್ಲಿ ಗಣಪತಿಯ ಮೆರವಣಿಗೆಯ ಟಿಪ್ಪು ನಗರ 7 ಏಳನೇ ತಿರುವಿನಲ್ಲಿರುವ ಯಾ ರಸುಲ್ ಉಲ್ಲಾ ಮಸೀದಿಯ ಬಳಿ ಬಂದಾಗ ಮುಸ್ಲಿಂ ಮುಖಂಡರುಗಳಾದ ಸೈಯದ್ ಅಫ್ಸರ ಸೈಯದ್ ಸರ್ದಾರ ಅಕ್ರಮ ರಿಯೋ ರಿಯಾಜ್ ಶಫಿವುಲ್ಲಾ ಆಶಿಕ್ ತಬ್ರೆಜ್ ಮುಬಾರಕ್ ರವರು ಗಣಪತಿಗೆ ಹೂವಿನ ಮಾಲೆಯನ್ನು ಹಾಕಿ ಸಿಹಿಯನ್ನು ಹಂಚಿ ಭಾವೈಕ್ಯತೆಯನ್ನು ಮೆರೆದಿದ್ದಾರೆ.

ಈ ಸಮಯದಲ್ಲಿ ಗಣಪತಿ ಕಮಿಟಿಯ ಅಧ್ಯಕ್ಷರಾದ ಮಹದೇವಪ್ಪನವರು ಮುಸ್ಲಿಂ ಮುಖಂಡರುಗಳಿಗೆ ಶಾಲು ಮತ್ತೆ ಹೂವಿನ ಹಾರವನ್ನು ಹಾಕಿ ಅಭಿನಂದಿಸಿರುತ್ತಾರೆ.
ಸ್ಥಳದಲ್ಲಿ ತುಂಗಾನಗರ ಪೊಲೀಸ್ ಠಾಣಾ ಪಿಐ ಗುರುರಾಜ್ ಮತ್ತು ಅಧಿಕಾರಿಗಳು  ಸಿಬ್ಬಂದಿಗಳು ಹಾಜರಿರುತ್ತಾರೆ.