ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪಿ ನಗರದ ನಾಗಲಿಂಗೇಶ್ವರ ದೇವಸ್ಥಾನ ಕಮಿಟಿಯ ಗಣಪತಿ ಮೂರ್ತಿಯ ಮೆರವಣಿಗೆ ಸಾಗುವ ವೇಳೆ ಜೆಪಿ ನಗರದ ಜಂಡಕಟ್ಟೆ ಮಖಾನ್ ಮತ್ತು ಗೌಸಿಯ ಕಮಿಟಿಯ ಸದಸ್ಯರುಗಳಾದ ರಿಯಾಜ್, ರಹೀಲ್, ಸಾದಿಕ್, ಇರ್ಫಾನ್ ಮತ್ತು ಇತರರು ಗಣಪತಿಗೆ ಮಾಲೆಯನ್ನು ಅರ್ಪಿಸಿ ಭಾವೈಕ್ಯತೆಯನ್ನು ಮೆರೆದಿರುತ್ತಾರೆ.
ಈ ವೇಳೆ ಗಣಪತಿ ಕಮಿಟಿಯ ಸದಸ್ಯರುಗಳಾದ ಸುಧಾಕರ, ಕಣ್ಣ, ಮನೋಜ, ಸುಬ್ರಹ್ಮಣ್ಯ ಮತ್ತು ಇತರರು ಹಾಗೂ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರವರಾದ ಗುರುರಾಜ್ ಕೆಟಿ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪನಿರೀಕ್ಷಕರವಾದ ರಘುವೀರ್, ಹಾಗೂ ಠಾಣಾ ಸಿಬ್ಬಂದಿಗಳಾದ ಉಮೇಶ್ ಜೀ ಆರ್, ರಮೇಶ್ ಕೆ ಟಿ, ಚೇತನ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳು ಹಾಜರಿರುತ್ತಾರೆ .