ಇತ್ತೀಚಿಗೆ 18 ವರ್ಷದೊಳಗಿನ ಅಪ್ರಾಪ್ತ ಹೆಣ್ಣು ಮಕ್ಕಳು ಗರ್ಭ ಧರಿಸುತ್ತಿರುವ ಪ್ರಕರಣಗಳು ಹಾಗೂ ಫೋಕ್ಸೊ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇದರಿಂದ ಉಂಟಾಗುವ ಸಮಸ್ಯೆಗಳು ಹಾಗೂ ಅದನ್ನು ತಡೆಗಟ್ಟುವ ಕ್ರಮಗಳ ಕುರಿತು ಖ್ಯಾತ ಸ್ತ್ರೀರೋಗ ತಜ್ಞರಾದ ಡಾ.ಚಂದುಶ್ರೀ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ನಾಲ್ಕು ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ಸೆ.4 ಸಂಜೆ 7 ಗಂಟೆಗೆ “ಇಗ್ನೆಂಟ್ ಮೈಂಡ್ ಅಂಡ್ ಇಗ್ನೆಂಟ್ ಪಾಸಿಟಿವ್” ಎಂಬ ಘೋಷವಾಕ್ಯದಡಿ “ಇನ್ಸ್ ಪೈರ್” ಆನ್‌ಲೈನ್ ಪೋಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯ, ರಕ್ತ ಹೀನತೆಯ ಕಾರಣಗಳ ಕುರಿತು ಅದರಿಂದ ಉಂಟಾಗುವ ದುಷ್ಪಾರಿಣಾಮಗಳು ಹಾಗೂ ಅದನ್ನು ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಮುಂಜಾಗೃತೆ ಕ್ರಮಗಳ ಕುರಿತು ಸೂಚನೆ ನೀಡಿದರು. ಹಾಗೂ ಆಹಾರ ಪದ್ದತಿ, ಗ್ಯಾಸ್ಟಿçಕ್ ಸಮಸ್ಯೆ, ಥೈರಾಯ್ಡ್ ಸಮಸ್ಯೆ, ಯೂರಿನ್ ಇನ್ಫೆಕ್ಷನ್, ಬಿಳಿಮುಟ್ಟು, ತಲೆಕೂದಲು ಉದುರುವ ಕುರಿತು, ಅಪಾಯಕಾರಿ ಲೈಂಗಿಕ ಚಟುವಟಿಕೆಗಳ ಪ್ರಚೋದನೆಯ ಕಾರಣಗಳು, ಅದನ್ನು ತಡೆಗಟ್ಟುವ ಕ್ರಮ ಹಾಗೂ ಅದರಿಂದ ಉಂಟಾಗುವ ಅಪಾಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ವಿಕಲ್ ಕ್ಯಾನ್ಸರ್/ಓವಿರೈನ್ ಕ್ಯಾನ್ಸರ್/ಬ್ರೆಸ್ಟ್ ಕ್ಯಾನ್ಸರ್ ಗೆ ಕಾರಣಗಳು ಮತ್ತು ಅದನ್ನು ತಡೆಯುವ ಕ್ರಮಗಳು ಹಾಗೂ ಫೋಕ್ಸೋ ಕಾಯಿದೆ ಕುರಿತು ಜಾಗೃತಿ ಮತ್ತು ಇತರೆ ಉಪಯುಕ್ತ ಮಾಹಿತಿ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಎನ್.ಹೇಮಂತ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಮಲ್ಲೇಶಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಜಿ.ಶ್ರೀನಿವಾಸ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರೀತಿ ಭಾಗವಹಿಸಿದ್ದರು.