ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯ ಭಗತ್ ಸಿಂಗ್ ಯುವಕರ ಸಂಘ ಜೆಪಿ ನಗರ ಗಣಪತಿಯ ಮೆರವಣಿಗೆಯ ಸಮಯದಲ್ಲಿ ಜಂಡೆಕಟ್ಟೆ ಮಗ ಗೌಸಿಯ ಕಮಿಟಿ ರವರ ವತಿಯಿಂದ ಗಣಪತಿಗೆ ಹೂವಿನ ಮಾಲೆಯನ್ನು ಹಾಕಿ ಐಸ್ ಕ್ರೀಮ್ ಮತ್ತು ಜ್ಯೂಸನ್ನು ವಿತರಣೆ ಮಾಡಿರುತ್ತಾರೆ.
ಈ ಸಮಯದಲ್ಲಿ ಮುಸ್ಲಿಂ ಮುಖಂಡರುಗಳಾದ ಸಾಧಿಕ್ ರಿಯಾಜ್ ಫಯಾಜ್ ರಾಹುಲ್ ಮುಖೀದು ಫಾರೂಕ್ ಸೈಪು ಇರ್ಫಾನ್ ಹಾಗೂ ಇತರೆ ಮುಸ್ಲಿಂ ಮುಖಂಡರುಗಳು ಹಾಜರಿರುತ್ತಾರೆ.ಈ ಸಮಯದಲ್ಲಿ ಕ್ರಿಶ್ಚಿಯನ ಮುಖಂಡರುಗಳಾದ ಚಿರಂಜೀವಿ ಬಾಬು ಸಂತೋಷ್ ಕಿರಣ ಸ್ಯಾಮ್ ಆಲ್ವಿನ ಸೋನಿತ್ ಗಣಪತಿ ಕಮಿಟಿಯವರಾದ ಯಶವಂತ್ ಸುರೇಶ ಚಂದು ರವರು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಈ ಸಂದರ್ಭದಲ್ಲಿ ತುಂಗಾನಗರ ಪಿಐ ಗುರುರಾಜ್ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.