ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಶಾಮಣ್ಣ ಟ್ರಸ್ಟ್ (ರೀ) ಶ್ರೀ ಆದಿ ರಂಗನಾಥ ಸ್ವಾಮಿ ದೇವಸ್ಥಾನ ಹಾಗೂ ಕಂಪಾನಿಯೋ ಇವರ ಸಹಯೋಗದಲ್ಲಿ 12 ದಿನಗಳ ಉಚಿತ ಫುಟ್ ಪಲ್ಸ್ ತೆರಫಿ ಚಿಕಿತ್ಸಾ ಶಿಬಿರ  ಕಾರ್ಯಕ್ರಮ ಉದ್ಘಾಟನೆಯಾಯಿತು.

ದಿನಾಂಕ 5 .9 . 2025 ರಿಂದ 14.09.2025 ರವರೆಗೆ 7:00 ಗಂಟೆ ಯಿಂದ 11:00 ಗಂಟೆವರೆಗೆ ಶ್ರೀ ಆದಿ ರಂಗನಾಥ ಸ್ವಾಮಿ ದೇವಸ್ಥಾನ ಗೋಪಾಳ ಶಿವಮೊಗ್ಗ ಇಲ್ಲಿ ಶಿಬಿರ ನಡೆಯಲಿದೆ. ಬಡಾವಣೆಯ ನಿವಾಸಿಗಳು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ Rtn ಆನಂದ್ ಜಿಎಸ್ ಅಧ್ಯಕ್ಷರಾದ ಬಸವರಾಜ್ ಬಿ, ಕಾರ್ಯದರ್ಶಿ ಜಯಶೀಲ ಶೆಟ್ಟಿ, ವಲಯ ಸೇನಾನಿ ಕಿರಣ್ ಕುಮಾರ್ ಜಿ ಹಾಗೂ ಕಂಪಾನಿಯೋ ಕಂಪನಿಯ ಪ್ರತಿನಿಧಿ ಉನ್ನತ್ ಅವರಿಗೂ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ರವಿ ಕೊಠಜಿ,ಸಂತೋಷ್ ಬಿ ಬಲರಾಮ್, ಗುರುಪ್ರಸಾದ್, ಈಶ್ವರ್ ಬಿವಿ ಜಗದೀಶ್ ಜಿಎಸ್, ಚಂದ್ರು ಜೆಪಿ ಇದ್ದರು.