ಶಿವಮೊಗ್ಗ ತಾಲೂಕು ಬಾಳೆ ಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕೇಂದ್ರ ಸರ್ಕಾರದ, RBI na ಹಣಕಾಸು ಸೇರ್ಪಡೆ ಅಡಿಯಲ್ಲಿ ಸಾಕ್ಷರತೆ ಮೂರು ತಿಂಗಳ ಅಭಿಯಾನದ ಪ್ರಯುಕ್ತ ಜನ ಸುರಕ್ಷಾ ಅಭಿಯಾನವನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ ಯೋಜನಾ ನಿರ್ದೇಶಕರು ಶ್ರೀಮತಿ ನಂದಿನಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಾರ್ಯಾಲಯದ ಡಿ ಜಿಎಂ ಶ್ರೀ ದೇವರಾಜ್ ಅವರು ಲೀಡ್ ಬ್ಯಾಂಕ್ ನ ಎಡಿಎಂ ಶ್ರೀ ಹನುಮಂತಪ್ಪ ಅವರು ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಉಪಸ್ಥಿತರಿದ್ದರು.

ಗ್ರಾಮಸ್ಥರಿಗೆ ಪ್ರಧಾನ್ ಮಂತ್ರಿ ಪಿ ಎಂ ಜೆ ಡಿ ವೈ,ಪಿ ಎಂ ಎಸ್ ಬಿ ವೈ, ಪಿ ಎಂ ಜೆ ಜೆ ಬಿ ವೈ, ಎ ಪಿ ವೈ ಹಾಗೂ ಇತರ ಸವಲತ್ತುಗಳನ್ನು ಪರಿಚಯಿಸಿ ಅರಿವು ಮೂಡಿಸಲಾಯಿತು ಹಾಗೇನೆ ನೋಂದಣಿಗಳನ್ನು ಮಾಡಲಾಯಿತು.