ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೂಮಿ‌ ಕಳೆದುಕೊಂಡ ರೈತ ಸಂತ್ರಸ್ತರಿಗೆ ನಿವೇಶನ ನೀಡುವ ಆಶ್ವಾಸನೆ ಈಡೇರದ ಹಿನ್ನಲೆಯಲ್ಲಿ ವಿಕಾಸ ಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ವಸತಿ ಸಚಿವರಾದ ಶ್ರೀ ಜಮೀರ್ ಅಹಮ್ಮದ್ ರವರ ಕಛೇರಿಯಲ್ಲಿ ಸಭೆ ನಡೆಸಲಾಯಿತು.ಸಚಿವರಿಬ್ಬರು ಸಾಧಕ ಬಾಧಕಗಳನ್ನು ಬಗೆಹರಿಸಿ ಅದಷ್ಟು ಬೇಗ ನಿವೇಶನ ಒದಗಿಸುವ ಭರವಸೆ ನೀಡಿದರು.

ಈ ಸಭೆಯಲ್ಲಿ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷರಾದ ಆರ್,ವಿಜಯಕುಮಾರ್(ದನಿ) ಸಂತೇಕಡೂರುರವರು, ನಿಕಟ ಪೂರ್ವ ವಿಧಾನ ಸಭಾ ಅಭ್ಯರ್ಥಿ ಶ್ರೀನಿವಾಸ್ ಕರಿಯಣ್ಣ ಜಿಲ್ಲಾಧಿಕಾರಿಗಳು , ಕೆ ಐ ಡಿ ಬಿ ಎಂ,ಡಿ ಹಾಗೂ ರೈತ ಮುಖಂಡರುಗಳಾದ ಕೃಷ್ಣಪ್ಪ, ಶಿವಾನಂದಪ್ಪ,ಶಿವುಕುಮಾರ್, ನಾಗೇಶ್ ಕೆ ಸಿ,ಗಣೇಶ್,ವೀರಭದ್ರಪ್ಪ ಮುತಾಂದವರು ಉಪಸ್ಥಿತರಿದ್ದರು.