ಅಮೃತ ಅನ್ನದಾಸೋಹ ಪ್ರತಿಷ್ಠಾನ 100 ದಿನದ ಸಂಭ್ರಮ…
ಆತ್ಮೀಯ ಬಂಧುಗಳೇ,
ಪ್ರತಿಷ್ಠಾನದಿಂದ ಅಮೃತ ಅನ್ನದಾಸೋಹ ಸೇವೆಯು ಯಶಸ್ವಿಯಾಗಿ ನೂರು ದಿನಗಳನ್ನು ಪೂರ್ಣಗೊಳಿಸಿ ಅರ್ಥಪೂರ್ಣವಾಗಿ ನೂರರ ಸಂಭ್ರಮ ಏರ್ಪಡಿಸಿ ಮುನ್ನಡೆಯುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.
ಈ ಮಾನವೀಯ ಸೇವೆಗೆ ಕಾರಣಕರ್ತರಾದ ನಮ್ಮೆಲ್ಲ ದಾನಿಗಳು ಮತ್ತು ಸೇವಾಕರ್ತರು ಒಂದೆಡೆ ಸೇರಿ ಸಹ ಭೋಜನ ಮಾಡಲು ವ್ಯವಸ್ಥೆ ಮಾಡಲಾಗಿದೆ.
ದಿನಾಂಕ: 11 9 2025 ರ ಗುರುವಾರ ಮಧ್ಯಾಹ್ನ 11:30 ಕ್ಕೆ ಶಿವಮೊಗ್ಗ ಬಂಟರ ಭವನ, 100 ಅಡಿ ರಸ್ತೆ, ಗೋಪಾಲಗೌಡ ಬಡಾವಣೆ ಇಲ್ಲಿ ಚಿಕ್ಕ ಕಾರ್ಯಕ್ರಮ ಹಾಗೂ ಸಹಬೋಜನ ಏರ್ಪಡಿಸಲಾಗಿದೆ.
ಅನ್ನದಾಸೋಹ ಕಾರ್ಯಕ್ಕೆ ಸಹಾಯ ಹಸ್ತ ಚಾಚಿದ ಎಲ್ಲಾ ದಾನಿಗಳು ಮತ್ತು ಪ್ರತಿಷ್ಠಾನದ ಸೇವಾಕರ್ತರು ಕುಟುಂಬ ಸಮೇತರಾಗಿ ಭಾಗವಹಿಸಬೇಕಾಗಿ ಪ್ರೀತಿಪೂರ್ವಕ ಆಮಂತ್ರಣ ನೀಡುತ್ತಿದ್ದೇವೆ.
ಬನ್ನಿ ಬಂಧುಗಳೇ ಇದು ನಮ್ಮದೇ ಕಾರ್ಯಕ್ರಮ. ಅತ್ಯಂತ ಸಂತೋಷದಿಂದ ಪಾಲ್ಗೊಂಡು ಸಂಭ್ರಮಿಸೋಣ.
ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ,
ಅಮೃತ ಅನ್ನದಾಸೋಹ ಪ್ರತಿಷ್ಠಾನ, ಶಿವಮೊಗ್ಗ