ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಆನ್ಸ್ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ DVS ಹೈ ಸ್ಕೂಲ್ ನಲ್ಲಿ ಇಂಟ್ರಾಕ್ಟ್ ಕ್ಲಬ್ ಇನ್ಸ್ಟಾಲೇಶನ್ ಕಾರ್ಯಕ್ರಮ ನಡೆಯಿತು.

ರೋಟರಿ ಕ್ಲಬ್ ನ ಇನ್ಟ್ರಾಕ್ಟ್ ಚೇರ್ಮೇನಾದ Rtnಗೀತಾ ಜಗದೀಶ್ ಅವರು ಎಲ್ಲರನ್ನು ಸ್ವಾಗತಿಸಿದರು. ಡಿ ವಿ ಎಸ್ ಇಂಟ್ರಾಕ್ಟ್ ಕ್ಲಬ್ ನ ಅಧ್ಯಕ್ಷರಾಗಿ ನಿಸರ್ಗ ಹಾಗೂ ಕಾರ್ಯದರ್ಶಿಯಾಗಿ ಭಾರ್ಗವ್ ಪದವಿ ಸ್ವೀಕಾರ ಮಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಲಕ್ಷ್ಮಣ್ ಪಿ ವಹಿಸಿದರು. ಜೋನ್ ಇಂಟ್ರಾಕ್ಟ್ ಕ್ಲಬ್ಬಿನ ವೈಸ್ ಚೇರ್ ಮ್ಯಾನ್ ಆದ Rtn ಮುಸ್ತಾಕ್ ಅಲಿಷ TM ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.

ವಲಯ ಸೇನಾನಿ ಕಿರಣ್ ಕುಮಾರ್ ಜಿ ಯವರು ವಿದ್ಯಾರ್ಥಿಗಳಿಗೆ ರೋಟರಿ ಮಹತ್ವವನ್ನು ತಿಳಿಸಿದರು. ರೋಟರಿ ಅಧ್ಯಕ್ಷರಾದ ಬಸವರಾಜ್ ರೋಟರಿ ಮಾಡುವ ಸಾಮಾಜಿಕ ಕೆಲಸದ ಬಗ್ಗೆ ತಿಳಿಸಿಕೊಟ್ಟರು.ಕಾರ್ಯದರ್ಶಿ ಜಯಶೀಲ ಶೆಟ್ಟಿ ಮಾತನಾಡಿ ರೋಟರಿ ಸಂಸ್ಥೆ ಒಂದು ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು ಯಾವುದೇ ಪಲಾಪೇಕ್ಷೆ ಇಲ್ಲದ ಸಂಸ್ಥೆಯಾಗಿದೆ.ಯಾವುದೇ ಜಾತಿ,ಧರ್ಮಕ್ಕೆ ಸೇರದ ಒಂದು ಸಾಮಾಜಿಕ ಸಂಸ್ಥೆಯಾಗಿದೆ. ಇದು ಆರೋಗ್ಯ,ಶಿಕ್ಷಣ, ಪರಿಸರ, ರಸ್ತೆ ಸುರಕ್ಷತೆ ಇಂತಹ ಸೇವಾ ಕಾರ್ಯಕ್ರಮ ಮಾಡುತ್ತದೆ. ರೋಟರಿ ಇಂಟರಾಕ್ಟ್ ಕ್ಲಬ್ ನ ಮುಖಾಂತರ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣವನ್ನು ಕಲಿಸಿಕೊಡುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ ಸದಸ್ಯರಾದ ಧರ್ಮೇಂದ್ರ ಸಿಂಗ್, ರವಿ ಕೊಟೊಜಿ , ಜಗದೀಶ್ ಜಿಎಸ್, ಬಲರಾಮ್, ಜೆಪಿ ಚಂದ್ರು, ನಟರಾಜ್, ರೊಟೇರಿಯನ್ ಜ್ಯೋತಿಶ್ರೀರಾಮ್, ಆನ್ಸ್ ಕ್ಲಬ್ ನ ಅಧ್ಯಕ್ಷರಾದ ರಾಜಶ್ರೀ ಬಸವರಾಜ್ ಕಾರ್ಯದರ್ಶಿ ಮಥುರಾ ಧನಂಜಯ್, ರಾಜೇಶ್ವರಿ ಸಿಂಗ್ ಹಾಗೂ ಶಾಲಾ ಶಿಕ್ಷಕರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.