ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯು ಒದು ವಿಶೇಷ ಯೋಜನೆಯಾಗಿದ್ದು ಹೊಸದಾಗಿ ಕಿರು ಉದ್ದಿಮೆ ಆರಂಭಿಸುವವರಿಗೆ ಕೃಷಿ ವಿಶ್ವವಿದ್ಯಾಲಯದಿಂದ ಲಭ್ಯವಿರುವ ಎಲ್ಲ ಸಹಕಾರ ನೀಡಲಾಗುವುದು ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ ಜಗದೀಶ್ ತಿಳಿಸಿದರು.


ಆತ್ಮನಿರ್ಭರ ಭಾರತ ಅಭಿಯಾನ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಗಳ ಸಂಸ್ಕರಣೆ ಹಾಗೂ ರಫ್ತುನಿಗಮ ನಿಯಮಿತ(ಕೆಎಪಿಪಿಇಸಿ), ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ ಹಾಗೂ ಕೃಷಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಜಿ.ಪಂ. ಸಭಾಂಗಣದಲ್ಲಿ ಫಲಾನುಭವಿಗಳಿಗೆ ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಹಾಗೂ ಆತ್ಮ ಯೋಜನೆ ಕುರಿತಾದ ಅರಿಚು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಹೊಸದಾಗಿ ಕಿರು ಉದ್ದಿಮೆ ಆರಂಭಿಸುವವರಿಗೆ ವಿಶ್ವವಿದ್ಯಾಲಯದಿಂದ ಸಂಸ್ಕರಣೆಗೆ ಜಾಗ, ಪ್ರಯೋಗಾಲಯ ಹಾಗೂ ಬ್ಯಾಂಕ್ ಮೂಲಕ ಸಾಲ ಕೂಡ ಕೊಡಿಸಲಾಗುವುದು ಎಂದರು.
ಜಿಲ್ಲೆಯಿಂದ 100 ಟನ್‌ಗಳಷ್ಟು ಅಪ್ಪೆ ಮಿಡಿ ವಿದೇಶಕ್ಕೆ ರಫ್ತಾಗುತ್ತಿದೆ. ಮೆಕ್ಕೆಜೋಳದಿಂದ 50 ಕ್ಕೂ ಹೆಚ್ಚಿನ ಬಗೆಯ ಖಾದ್ಯವನ್ನು ಮಾಡಬಹುದು. ಹಾಗೂ ಹೊಸ ಹೊಸ ಖಾದ್ಯಗಳ ಸಂಶೋಧನೆಗೂ ಅವಕಾಶ ಇದೆ. ಮಸಾಲೆ ಪದಾರ್ಥಗಳ ಸಂಶೊಧನೆಗಳನ್ನು ಕೂಡ ಮಾಡಬಹುದು.


ಅಣಬೆ ಹಾಗೂ ಬೇಕರಿ ಉದ್ಯಮದಲ್ಲಿ ಆಸಕ್ತಿ ಇರುವರಿಗೆ ತರಬೇತಿ ನೀಡಲಾಗುತ್ತದೆ. ಚಾಕೊಲೇಟ್ ಉದ್ಯಮ ಮಾಡುವವರಿಗೂ ಪ್ರೋತ್ಸಾಹ ನೀಡಲಾಗುತ್ತದೆ. ಹಾಗೂ ವಿವಿಧ ಖಾದ್ಯಗಳಲ್ಲಿ ವಿಟಮಿನ್ ಮತ್ತು ಪ್ರೋಟಿನ್ ಮಟ್ಟವನ್ನು ಪರೀಕ್ಷೆ ಮಾಡಲಾಗುತ್ತದೆ ಎಂದ ಅವರು ತಾಂತ್ರಿಕತೆ ಬಗ್ಗೆ ತರಬೇತಿ ಹಾಗೂ ಖಾದ್ಯಗಳ ಪ್ಯಾಕಿಂಗ್‌ಗೂ ತರಬೇತಿ ನೀಡಲಾಗುವುದು. ನಮ್ಮಲ್ಲಿರುವ ವಿಜ್ಞಾನಿಗಳು ಮತ್ತು ಸೌಲಭ್ಯಗಳನ್ನು ರೈತರು, ಆಸಕ್ತರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.


ಕೆಎಪಿಪಿಇಸಿ ಯ ವ್ಯವಸ್ಥಾಪಕ ನಿರ್ದೇಶಕ ಸಿ.ಎ.ಶಿವಪ್ರಕಾಶ್ ಮಾತನಾಡಿ, ರೈತರ ಆದಾಯ ಹೆಚ್ಚಿಸಿ ಅವರನ್ನೂ ಉದ್ದಿಮೆದಾರರನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು 2020-21 ರಲ್ಲಿ ಪ್ರಾರಂಭಿಸಲಾಗಿದೆ. ರೂ. 15 ಲಕ್ಷದವರೆಗೆ ಸಹಾಯಧನ ನೀಡಲಾಗುವುದು. ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸೇರಿ ರೂ. 10 ಸಾವಿರ ಕೋಟಿ ಮಂಜೂರಾಗಿದ್ದು ರಾಜ್ಯದ ಪಾಲು ರೂ.493.65ಕೋಟಿ ಆಗಿದೆ
ಈ ಯೋಜನೆಯು ದೇಶದ ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿದೆ. ರೈತರು ಬೆಳೆಗೆ ಉತ್ತಮ ಬೆಲೆ ಸಿಗಬೇಕಾದರೆ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕು. ಈ ಯೋಜನೆ ಮೌಲ್ಯವರ್ಧನೆಗೆ ಬಹು ಮುಖ್ಯ ವಲಯವಾಗಿದ್ದು ನಿರಂತರ ಬೆಳೆಯುತ್ತಿರುವ ಕ್ಷೇತವಾಗಿದೆ. ಈವರೆಗೆ ಸಿರಿಧಾನ್ಯದ 2 ಸಾವಿರ ಘಟಕಗಳಿಗೆ ಸಹಾಯಧನ ನೀಡಲಾಗಿದೆ.
ಪದವಿ ಮುಗಿಸಿ, ಕಂಪ್ಯೂಟರ್ ಜ್ಞಾನ ಹೊಂದಿದವರು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸಬಹುದು. ಒಂದು ಪ್ರಾಜೆಕ್ಟ್ ಗೆ ರೂ. 20 ಸಾವಿರ ಸಿಗುತ್ತದೆ. ಈ ಯೋಜನೆಯಡಿ ಶಿವಮೊಗ್ಗ ರಾಜ್ಯದಲ್ಲಿ 5 ನೇ ಸ್ಥಾನದಲ್ಲಿದ್ದು ಉತ್ತಮ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಉತ್ತಮ ಸಂಪನ್ಮೂಲವಿದ್ದು ಆಹಾರ ಸಂಸ್ಕರಣೆಗೆ ಭಾರೀ ಅವಕಾಶ ಇದ್ದು ಉತ್ತಮ ಉದ್ಯೋಗಾವಕಾಶ ಸೃಷ್ಟಿಸಲಾಗುತ್ತಿದೆ ಎಂದರು.


ಜಂಟಿ ಕೃಷಿ ನಿರ್ದೇಶಕ ಕಿರಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳ ನಿಯಮಬದ್ದಗೊಳಿಸುವಿಕೆ ಯೋಜನೆಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಪ್ರಾರಂಭ ಹಂತದಲ್ಲಿ ನಮ್ಮ ಜಿಲ್ಲೆಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನದಡಿ ಅನಾನಸ್ ಬೆಳೆಯನ್ನು ಆಯ್ಕೆ ಮಾಡಲಾಗಿದೆ. ನಂತರ ಅಸಂಘಟಿತ ಆಹಾರ ಸಂಸ್ಕರಣಾ ಉದ್ಯಮಿಗಳ ಉನ್ನತೀಕರಣಕ್ಕೆ ಮತ್ತು ವಿಸ್ತರಣೆಗೆ ಅವಕಾಶ ಕಲ್ಪಿಸಲಾಗುವುದು.


ಸಾಕಷ್ಟು ಕಿರು ಉದ್ದಮೆ ಆರಂಭವಾಗಿದ್ದು ಕಿರು ಉದ್ದಿಮೆಗಳಿಂದಾಗಿ ರೈತರ ಉತ್ಪನ್ನಗಳ ಮೌಲ್ಯವರ್ಧನೆ ಆಗಿ ಆದಾಯ ಹೆಚ್ಚಳಕ್ಕೆ ಸಹಾಯವಾಗುತ್ತಿದೆ. ಈ ಯೋಜನೆಯಡಿ 15 ಲಕ್ಷ ಸಹಾಯಧನ ಪಡೆಯಲು ಅವಕಾಶವಿದ್ದು ಜಿಲ್ಲೆಯಲ್ಲಿ ಈವರೆಗೆ 344 ಅರ್ಜಿಗಳಿಗೆ ಬ್ಯಾಂಕ್ ಸಾಲ ಮಂಜೂರಾತಿ ಆಗಿದೆ. 97 ಎಣ್ಣೆಗಾಣದ ಉತ್ಪನ್ನಗಳು, 55 ಬೇಕರಿ ಉತ್ಪನ್ನಗಳು, 53 ರಾಗಿ, 28 ಪೈನಾಪಲ್ ಆಧಾರಿ ಉತ್ಪನ್ನಗಳು, 16 ಅಕ್ಕಿ ಹಾಊ ಬೆಲ್ಲದ ಸಂಸ್ಕರಣ ಘಟಕಗಳು, 7 ಸಾಂಬಾರು ಹಾಗೂ ಹಾಲಿನ ಉತ್ಪನ್ನಗಳು, 5 ಉಪ್ಪಿನಕಾಯಿ ಮತ್ತು 4 ಬೇಳೆ ಆಧಾರಿತ ಉತ್ಪನ್ನಗಳಿಗೆ ಮಂಜೂರಾತಿ ದೊರೆತಿದೆ. ಜಿಲ್ಲೆಯಲ್ಲಿ 16 ಉದ್ದಿಮೆದಾರರು ನೋಂದಣಿ 8 ಫಲಾನುಭವಿಗಳು ಇದ್ದು, ಆಸಕ್ತರು ಈ ಸೌಲಭ್ಯಗಳ ಸದುಪಯೋಗಪಡೆಯಬೇಕೆಂದರು.


ಕೆಎಪಿಪಿಇಸಿ ಟೀಂ ಲೀಡರ್ ಅರವಿಂದ ಕರೆ ಮಾತನಾಡಿ, ಪಿಎಂಎಓಫ್‌ಎAಇ ಯೋಜನೆಯಡಿ ಉದ್ದಿಮೆಗಳಿಗೆ ವೃತ್ತಿಪರ ಹಾಗೂ ತಾಂತ್ರಿಕ ಬೆಂಬಲ ದೊರೆಯುವಿಕೆಯನ್ನು ಹೆಚ್ಚಿಸುವುದು. ಬ್ರಾಂಡಿAಗ್ ಹಾಗೂ ಮಾರ್ಕೆಟಿಂಗ್ ಬೆಂಬಲ, ಸಾಮಾನ್ಯ ಮೂಲಭೂತ ಸೌಕರ್ಯಕ್ಕೆ ಬೆಂಬಲ, ಸಾಮರ್ಥ್ಯ ನಿರ್ಮಾಣ ಹಾಗೂ ಸಂಶೋಧನೆ, ಕಿರು ಉದ್ದಿಮೆಗಳ ವೈಯಕ್ತಿಕ ಹಾಗೂ ಗುಫುಗಳಿಗೆ ಬೆಂಬಲ ನೀಡಲಾಗುವುದು.
ಬ್ರಾಂಡಿAಗ್ ಹಾಗೂ ಮಾರ್ಕೆಟಿಂಗ್ ಅನ್ನು ಬಲಪಡಿಸುವುದು, ಸಾಮಾನ್ಯ ಸಂಸ್ಕರಣಾ ಸೌಲಭ್ಯ, ಪ್ರಯೋಗಾಲಯಗಳು, ದಾಸ್ತಾನನ್ನು ಶೇಖರಣೆ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಹಾಗೂ ಇನ್‌ಕ್ಯೂಬೇಷನ್ ಸೇವೆಗಳಂತಹ ಸಾಮಾನ್ಯ ಸೇವೆಗಳ ದೊರೆಯುವಿಕೆಯನ್ನು ಹೆಚ್ಚಿಸುವುದು.

ತಾಂತ್ರಿಕ ಸಂಸ್ಥೆಗಳನ್ನು ಬಲಪಡಿಸುವುದು, ಆಹಾರ ಸಂಸ್ಕರಣಾ ವಲಯದಲ್ಲಿ ಸಂಶೋಧನೆ ಹಾಗೂ ತರಬೇತಿಗೆ ಪ್ರೋತ್ಸಾಹ ನೀಡಲಾಗುವುದು ಎಂದ ಅವರು, ಈ ಯೋಜನೆಯಡಿ ಅರ್ಜಿ ಸಲ್ಲಿಕೆ ವಿಧಾನ, ಡಿಆರ್‌ಪಿ (ಜಿಲ್ಲಾ ಸಂಪನ್ಮೂಲ ವ್ಯಕ್ತಿ) ಆಯ್ಕೆ ಇತರೆ ಮಾಹಿತಿ ನೀಡಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ಮಾತನಾಡಿ ಈ ಯೋಜನೆಗೆ ಸಂಬAಧಿಸಿದAತೆ ಲಭ್ಯವಿರುವ ಸಾಲ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಾಯಿತು.

ಜಿ.ಪಂ ಉಪ ಕಾರ್ಯದರ್ಶಿ ಸುಜಾತ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನಾಗರಾಜ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಬಾಬುರಾಮ್. ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಕುಮಾರ್, ಇತರೆ ಅಧಿಕಾರಿಗಳು, ಯೋಜನೆಯ ಫಲಾನುಭವಿಗಳು ಪಾಲ್ಗೊಂಡಿದ್ದರು.